Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಮುಳ್ಳೇರಿಯಾದಲ್ಲಿ ರಬ್ಬರ್ ಶೀಟ್ ಕಳವು : 250 ಶೀಟ್‌ಗಳು ನಾಪತ್ತೆ

ಮುಳ್ಳೇರಿಯ : ಮನೆಯ ಸಮೀಪದ ಶೆಡ್‌ನಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 250 ರಬ್ಬರ್ ಶೀಟ್‌ಗಳು ಕಳವಾಗಿರುವ ಕುರಿತು ಆದೂರು ಪೊಲೀಸರಿಗೆ ದೂರು ನೀಡಲಾಗಿದೆ.

ಬೆಳ್ಳೂರು ಕಿನ್ನಿಂಗಾರ್‌ನ ಮೋಹನ ಕೃಷ್ಣ ಭಟ್ ಅವರ ರಬ್ಬರ್ ಒಣಗಿಸುವ ಕೊಠಡಿಯ ಸಮೀಪದ ಶೆಡ್‌ನಲ್ಲಿ ರಬ್ಬರ್ ಶೀಟ್‌ಗಳನ್ನು ಸಂಗ್ರಹಿಸಿಡಲಾಗಿತ್ತು. ಸೋಮವಾರ ರಾತ್ರಿ ವೇಳೆ ಕಳ್ಳತನ ನಡೆದಿರುವ ಶಂಕೆ ವ್ಯಕ್ತವಾಗಿದೆ.

ರಬ್ಬರ್ ಒಣಗಿಸುವ ಕೊಠಡಿಯ ಪಕ್ಕದ ರಸ್ತೆಯಲ್ಲಿ ಕೆಲವು ರಬ್ಬರ್ ಶೀಟ್‌ಗಳು ಬಿದ್ದಿರುವುದನ್ನು ಗಮನಿಸಿದ ಬಳಿಕ ಪರಿಶೀಲಿಸಿದಾಗ ಶೀಟ್‌ಗಳು ಕಳವಾಗಿರುವುದು ಬೆಳಕಿಗೆ ಬಂದಿದೆ.

ಇದೇ ಸ್ಥಳದಿಂದ ಈ ಹಿಂದೆ ಕೂಡ ರಬ್ಬರ್ ಶೀಟ್‌ಗಳು ಕಳವಾಗಿದ್ದವು ಎನ್ನಲಾಗಿದೆ. ಘಟನೆ ಕುರಿತು ಮೋಹನ ಕೃಷ್ಣ ಭಟ್ ಆದೂರು ಪೊಲೀಸರಿಗೆ ದೂರು ನೀಡಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement