Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಆದೂರಿನಲ್ಲಿ ನಾಪತ್ತೆಯಾಗಿದ್ದ ಯುವಕ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಆದೂರು : ನಾಪತ್ತೆಯಾಗಿದ್ದ ಯುವಕನೋರ್ವ ರಬ್ಬರ್ ತೋಟದಲ್ಲಿನ ಮಾವಿನ ಮರದ ಕೊಂಬೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ನೆಟ್ಟಣಿಗೆ ಕುಳದಪಾರ ಉನ್ನತಿಯ ಸುನಿಲ್ (26) ಮೃತಪಟ್ಟವರು.

ಆಗಸ್ಟ್ 12ರಂದು ಮನೆಯಿಂದ ಹೊರಗೆ ಹೋದ ಸುನಿಲ್ ಬಳಿಕ ನಾಪತ್ತೆಯಾಗಿದ್ದರು. ಈ ಕುರಿತು ತಂದೆ ಕೊರಗ ಅವರು ಆದೂರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಹಾಗೂ ಸ್ಥಳೀಯರು ನಡೆಸಿದ ಹುಡುಕಾಟದ ವೇಳೆ, ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಮನೆಯಿಂದ ಸ್ವಲ್ಪ ದೂರದಲ್ಲಿರುವ ರಬ್ಬರ್ ತೋಟದಲ್ಲಿ ಮಾವಿನ ಮರದ ಕೊಂಬೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಸುನಿಲ್ ಪತ್ತೆಯಾಗಿದ್ದಾರೆ. ಮರಣದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಮೃತರು ತಾಯಿ ಲಲಿತಾ, ಪತ್ನಿ ದೀಕ್ಷಿತಾ, ಪುತ್ರಿ ಕೃತಿಕಾ ಹಾಗೂ ಸಹೋದರಿ ಶ್ವೇತಾ ಎಂಬಿವರನ್ನು ಅಗಲಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement