Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಸೆ.14ಕ್ಕೆ ಬಾವಲಿಗುಳಿಯಲ್ಲಿ 12ನೇ ವರ್ಷದ ಗಣೇಶೋತ್ಸವ

ನರಿಂಗಾನ : ವರ್ಕಾಡಿ ಗಡಿ ಪ್ರದೇಶವಾದ ನರಿಂಗಾನ ಬಾವಲಿಗುಳಿಯಲ್ಲಿ 12ನೇ ವರ್ಷದ ಗಣೇಶೋತ್ಸವವು ಸೆ. 14  ಸೋಮವಾರ ಬಹಳ ಅದ್ದೂರಿಯಾಗಿ ನಡೆಯಲಿದೆ. ಅಂದು ಬೆಳಿಗ್ಗೆ ವರ್ಕಾಡಿ ದಿನೇಶ್ ಕೃಷ್ಣ ತಂತ್ರಿ ಅವರ ಮುಂದಾಳತ್ವದಲ್ಲಿ ವಿವಿಧ ವೈದಿಕ ವಿಧಿ ವಿಧಾನಗಳು ಜರಗಲಿಕ್ಕಿವೆ. ಮಧ್ಯಾಹ್ನ ಮಹಾಪೂಜೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಶ್ರೀ ಮಹಮ್ಮಾಯ ಭಜಕ ವೃಂದ ಶಾಂತಿ ಪಳಿಕೆ ಇವರಿಂದ ಭಜನಾ ಸಂಕೀರ್ತನೆ, ಮನೋರಂಜನಾ ಕಾರ್ಯಕ್ರಮ ದಂಗವಾಗಿ ಬೆಳಿಗ್ಗೆ 11:30 ರಿಂದ ದತ್ತಾಂಜನೇಯ ಕಲಾಬಳಗ ರಾಮಾಡಿ ಕಣ್ವ ತೀರ್ಥ 70 ಕಲಾವಿದರ ಒಟ್ಟು ಸೇರಿಗೆಯಲ್ಲಿ ಭರತ ವರ್ಷ ವೈಭವ, ಮಧ್ಯಾಹ್ನ 1:30 ರಿಂದ ಫ್ರೆಂಡ್ಸ್ ಮಂಗಳೂರು ಇವರಿಂದ "ತೆಲಿಕೆ ಬಾಯಿ ನೀಲಿಕೆ" ಎಂಬ ಹಾಸ್ಯ ಕಾರ್ಯಕ್ರಮ, ಸಂಜೆ 3:30 ರಿಂದ ಶ್ರೀ ದುರ್ಗಾ ನಾಟ್ಯಾಲಯ ಇವರಿಂದ ಶಾಸ್ತ್ರೀಯ ಹಾಗೂ ಜಾನಪದ ನೃತ್ಯ ಸಂಗಮ, ನಂತರ ಸನ್ಮಾನ ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಆರೋಗ್ಯ ಸಚಿವರಾದ ಯು.ಟಿ. ಖಾದರ್ ಪರೀದ್ಅವರಿಗೆ ವಿಶೇಷ ಗೌರಭಿನಂದನೆ, ಅಲ್ಲದೆ  ರಾಜಾರಾಮ್ ಭಟ್ (ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರು),  ನವಾಜ್ ನರಿಂಗಾನ (ಅಧ್ಯಕ್ಷರು ನರಿಂಗಾನ ಗ್ರಾಮ ಪಂಚಾಯತ್), ಪ್ರಶಾಂತ ಕಾಜವ (ಕಾರ್ಯಾಧ್ಯಕ್ಷರು ಲವಕುಶ ಜೋಡುಕರೆ ಕಂಬಳ ನರಿಂಗಾನ),  ಚಂದ್ರಹಾಸ ಶೆಟ್ಟಿ ಮೊರ್ಲ( ದ .ಕ  ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು) ಕೃಷ್ಣ ಶಿವ ಕೃಪ ಕುಂಜತ್ತೂರು (ಸಾಮಾಜಿಕ ,ಧಾರ್ಮಿಕ ನಾಯಕರು) ಸಂತೋಷ್ ಕುಮಾರ್ ರೈ ಬೊಳಿಯಾರು,(ಸಾಮಾಜಿಕ, ರಾಜಕೀಯ ಧಾರ್ಮಿಕ ನಾಯಕರು )ಜೆಪಿ ತೂಮಿನಾಡು (ರಂಗನಟ, ಚಲನಚಿತ್ರ ನಿರ್ದೇಶಕರು ಹಾಗೂ ನಟ), ಪ್ರಕಾಶ್ ತೂಮಿನಾಡು, (ರಂಗನಟ ಹಾಗೂ ಚಲನಚಿತ್ರ ನಟ) ಇವರೆಲ್ಲರಿಗೂ ಗೌರವಾನ್ವಿತ ಅತಿಥಿವರ್ಯರ ಸಮ್ಮುಖದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿಕ್ಕಿದೆ. ನಂತರ ಗಣಪತಿ ಯಾತ್ರ ಪೂಜೆ , ಸುಡು ಮದ್ದು ಸೇವೆ ನಡೆದು ಗಣೇಶನ ಭವ್ಯಶೋಭ ಯಾತ್ರೆಯು ಕೆದುಂಬಾಡಿ ನೆತ್ತಿಲ ಪದವು ಬಾವಲಿ ಗುಳಿ, ತೌಡುಗೋಳಿಯಾಗಿ ಶಾಂತಿಪಳಿಕೆ ಮಾರಿಗುಡಿ ಬಳಿ ಕೆರೆಯಲ್ಲಿ ವಿಸರ್ಜನೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.

Post a Comment

0 Comments

ಜಾಹೀರಾತು

Responsive Advertisement