Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕಾಸರಗೋಡಿನಿಂದ ಕುಂಬಳೆಗೆ ಪ್ರಿಯದರ್ಶಿನಿ ಬಸ್ ಪ್ರಯಾಣದ ವೇಳೆ ಪಿಗ್ಮಿ ಏಜೆಂಟ್‌ನ ಬ್ಯಾಗ್‌ನಿಂದ 20 ಸಾವಿರ ರೂ. ಕಳವು


ಕಾಸರಗೋಡು : ಕುಂಬಳೆಯತ್ತ ತೆರಳುತ್ತಿದ್ದ ಪ್ರಿಯದರ್ಶಿನಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ  ಪಿಗ್ಮಿ ಏಜೆಂಟ್‌ ರ್ವರ ಬ್ಯಾಗ್‌ನಿಂದ 20 ಸಾವಿರ ರೂ. ಕಳವುಗೊಂಡ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಕಳತ್ತೂರು ನಿವಾಸಿ ರಾಘವ (49) ಹಣ ಕಳೆದುಕೊಂಡವರು. ಶನಿವಾರ ಬೆಳಗ್ಗೆ ಕಾಸರಗೋಡಿಗೆ ಆಗಮಿಸಿದ್ದ ರಾಘವ ಬ್ಯಾಂಕ್‌ನಲ್ಲಿ ಹಣ ಪಾವತಿಸಿದ ಬಳಿಕ ರೂ. 20 ಮುಖಬೆಲೆಯ ನೋಟುಗಳ ಕಟ್ಟುಗಳನ್ನು ಪಡೆದು ಬ್ಯಾಗ್‌ನಲ್ಲಿ ಇರಿಸಿದ್ದರು. ಬಳಿಕ ಕಾಸರಗೋಡಿನಿಂದ ಕುಂಬಳೆಯತ್ತ ತೆರಳಲು ಪ್ರಿಯದರ್ಶಿನಿ ಬಸ್ ಹತ್ತಿದ್ದರು. ಬಸ್ ಮೊಗ್ರಾಲ್ ತಲುಪಿದ ವೇಳೆ ಬ್ಯಾಗ್‌ನ ಜಿಪ್ ತೆರೆದಿರುವುದು ರಾಘವ ಅವರ ಗಮನಕ್ಕೆ ಬಂದಿದೆ. ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿದ್ದ 20 ಸಾವಿರ ರೂ. ನಾಪತ್ತೆಯಾಗಿರುವುದು ತಿಳಿದುಬಂದಿದೆ. ತಕ್ಷಣವೇ ಅವರು ಬಸ್ ನಿರ್ವಾಹಕರಿಗೆ ಮಾಹಿತಿ ನೀಡಿದ್ದು, ಬಸ್ ಅನ್ನು ಕುಂಬಳೆ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಪ್ರಯಾಣಿಕರೆಲ್ಲರನ್ನು ತಪಾಸಣೆ ನಡೆಸಿದರೂ ಕಳುವಾದ ಹಣ ಪತ್ತೆಯಾಗಲಿಲ್ಲ. ಸುಮಾರು ಅರ್ಧ ಗಂಟೆಯ ಬಳಿಕ ಬಸ್ ತನ್ನ ಪ್ರಯಾಣ ಮುಂದುವರಿಸಿತು. ಘಟನೆಗೆ ಸಂಬಂಧಿಸಿ ಕುಂಬಳೆ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement