Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಮಧುವಾಹಿನಿ ನದಿಯಲ್ಲಿ ಮುಳುಗಿದ್ದ 8 ವರ್ಷದ ಬಾಲಕ ಚಿಕಿತ್ಸೆ ಫಲಿಸದೆ ಸಾವು

ಕಾಸರಗೋಡು : ತಂದೆಯೊಂದಿಗೆ ಸ್ನಾನಕ್ಕೆ ತೆರಳಿದ್ದ ವೇಳೆ ಮಧುವಾಹಿನಿ ನದಿಯಲ್ಲಿ ಮುಳುಗಿದ್ದ 8 ವರ್ಷದ ಬಾಲಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ಕಲ್ಲಕಟ್ಟ ಕಡಂಬಟ್ಟ ನಿವಾಸಿ ಕೆ.ಎ. ಮಷೂದ್ ಅವರ ಪುತ್ರ ಅಬ್ದುಲ್ಲಾ ಮೃತ ಬಾಲಕ. ಭಾನುವಾರ ಬೆಳಗ್ಗೆ 10ರ ಸುಮಾರಿಗೆ ತಂದೆ ಹಾಗೂ ಮಗ ಮಧುವಾಹಿನಿ ನದಿಯ ಕಡಂಬಟ್ಟಕ್ಕೆ ಸ್ನಾನಕ್ಕೆ ತೆರಳಿದ್ದರು. ಸ್ನಾನ ಮಾಡುತ್ತಿದ್ದ ವೇಳೆ ಅಬ್ದುಲ್ಲಾ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾನೆ. ಕೂಡಲೇ ಸ್ಥಳೀಯರು ನದಿಗೆ ಇಳಿದು ಬಾಲಕನನ್ನು ರಕ್ಷಿಸಿ ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ಇಂದು  ಮೃತಪಟ್ಟಿದ್ದಾನೆ.

Post a Comment

0 Comments

ಜಾಹೀರಾತು

Responsive Advertisement