Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಓಣಂಗೆ ವಿಶೇಷವಾಗಿ ನೀಡಿದ ಸ್ಪೆಷಲ್ ಅಕ್ಕಿ ಮುಂದಿನ ತಿಂಗಳುಗಳಲ್ಲೂ ವಿತರಿಸಲು ಕ್ರಮ ಕೈಗೊಳ್ಳಲು ಎಕೆಆರ್‌ಆರ್‌ಡಿಎ ವಾರ್ಷಿಕ ಮಹಾಸಭೆ ಒತ್ತಾಯ

 

ಕಾಸರಗೋಡು : ಓಣಂ ಹಬ್ಬದ ಹಿನ್ನೆಲೆಯಲ್ಲಿ ಸರ್ಕಾರ ವಿಶೇಷವಾಗಿ ಮಂಜೂರುಗೊಳಿಸಿದ ಸ್ಪೆಷಲ್ ಅಕ್ಕಿಯನ್ನು ಮುಂದಿನ ತಿಂಗಳುಗಳಲ್ಲೂ ಪಡಿತರ ಚೀಟಿದಾರರಿಗೆ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಲ್ ಕೇರಳ ರಿಟೇಲ್ ರೇಷನ್ ಡೀಲರ್ಸ್ ಅಸೋಸಿಯೇಷನ್‌ (ಎಕೆಆರ್‌ಆರ್‌ಡಿಎ) ಕಾಸರಗೋಡು ತಾಲೂಕು ವಾರ್ಷಿಕ ಮಹಾಸಭೆ ಸರ್ಕಾರವನ್ನು ಒತ್ತಾಯಿಸಿದೆ. ಎಕೆಆರ್‌ಆರ್‌ಡಿಎ ರಾಜ್ಯ ಕಾರ್ಯದರ್ಶಿ ಶಂಕರ್ ಬೆಳ್ಳಿಗೆ ಸಭೆಯನ್ನು ಉದ್ಘಾಟಿಸಿದರು. ತಾಲೂಕು ಅಧ್ಯಕ್ಷ ಬಾಲಕೃಷ್ಣ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಕಾಸರಗೋಡು ತಾಲೂಕು ಸಪ್ಲೈ ಅಧಿಕಾರಿ ಬಿ. ಕೃಷ್ಣ ನಾಯಕ್ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಎಕೆಆರ್‌ಆರ್‌ಡಿಎ ಜಿಲ್ಲಾಧ್ಯಕ್ಷ ಸತೀಶನ್ ಇಡವೇಲಿ, ಜಿಲ್ಲಾ ಖಜಾಂಚಿ ಲೋಹಿತಾಕ್ಷನ್, ಕಾರಡ್ಕ ಬ್ಲಾಕ್ ಪಂಚಾಯತ್ ಸದಸ್ಯ ಸುಧಾಮ ಗೋಸಾಡ, ಜಿಲ್ಲಾ ಕಾರ್ಯದರ್ಶಿ ಟಿ.ಎ. ಅಬ್ದುಲ್ ಗಫೂರ್, ತಾಲೂಕು ಉಪಾಧ್ಯಕ್ಷ ಕೆ. ವಸಂತ ಶೆಣೈ ಹಾಗೂ ಖಜಾಂಚಿ ಕೊಡೋತ್ ವಿಜಯನ್ ನಾಯರ್ ಮಾತನಾಡಿದರು. ತಾಲೂಕು ಕಾರ್ಯದರ್ಶಿ ಪ್ರದೀಪ್ ಮಾದಕ್ಕಲ್ ಸ್ವಾಗತಿಸಿದರು. ಜಂಟಿ ಕಾರ್ಯದರ್ಶಿ ರಮೇಶನ್ ಕೋಟೂರು ವಂದಿಸಿದರು.

Post a Comment

0 Comments

ಜಾಹೀರಾತು

Responsive Advertisement