ಪೆರ್ಲ : ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ‘ಆನಂದೋತ್ಸವ’ ಶಿಬಿರವನ್ನು ಸೆಪ್ಟೆಂಬರ್ 8ರಿಂದ 13ರವರೆಗೆ ಪೆರ್ಲದ ಶ್ರೀ ಗಣೇಶ ಮಂದಿರದಲ್ಲಿ ಆಯೋಜಿಸಲಾಗಿದೆ.
ಆರು ದಿನಗಳ ಕಾಲ ನಡೆಯುವ ಶಿಬಿರದಲ್ಲಿ ಯೋಗ, ಧ್ಯಾನ, ಪ್ರಾಣಾಯಾಮ, ಸುದರ್ಶನ ಕ್ರಿಯೆ ಹಾಗೂ ಜ್ಞಾನಾಧಾರಿತ ತರಬೇತಿ ನೀಡಲಾಗುತ್ತದೆ. ಪ್ರತಿದಿನ ಸಂಜೆ 5.30ರಿಂದ ರಾತ್ರಿ 8.30ರವರೆಗೆ ಶಿಬಿರ ನಡೆಯಲಿದೆ.
ಒತ್ತಡಮುಕ್ತ ಮನಸ್ಸು, ಮಾನಸಿಕ ನೆಮ್ಮದಿ, ಸಂತೋಷ ಮತ್ತು ಉತ್ಸಾಹ ಹೆಚ್ಚಿಸುವುದು ಹಾಗೂ ಉತ್ತಮ ನಿದ್ರೆ ಮತ್ತು ಆರೋಗ್ಯಕರ ಜೀವನಶೈಲಿಗೆ ಉತ್ತೇಜನ ನೀಡುವುದು ಶಿಬಿರದ ಪ್ರಮುಖ ಉದ್ದೇಶವಾಗಿದೆ.
ಶಿಬಿರವನ್ನು ನಾರಾಯಣನ್ ಅವರು ನಡೆಸಿಕೊಡಲಿದ್ದಾರೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ 9037170978, 9778003436, 9846223482, 9495618246 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ.
.png)
0 Comments