Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಹೋಟೆಲ್‌ನ ಅಡುಗೆಮನೆಯಲ್ಲಿ ಸಿಪಿಐ ಲೋಕಲ್ ಸಮಿತಿ ಸದಸ್ಯನ ಮೃತದೇಹ ಪತ್ತೆ

ಮುಳ್ಳೇರಿಯ : ಸಿಪಿಐ ಕುತ್ತಿಕೋಲು ಲೋಕಲ್ ಸಮಿತಿ ಸದಸ್ಯರೊಬ್ಬರ ಮೃತದೇಹ ಹೋಟೆಲ್‌ನ ಅಡುಗೆಮನೆಯಲ್ಲಿ ಪತ್ತೆಯಾದ ಘಟನೆ ಸೋಮವಾರ ನಡೆದಿದೆ.

ಕುತ್ತಿಕೋಲು ಚೆರಿಯಕಯ ನಿವಾಸಿ ಅಶೋಕನ್ (49) ಮೃತರು. ಎಂದಿನಂತೆ ಸೋಮವಾರ ಬೆಳಗ್ಗೆ ಮನೆಯಿಂದ ಹೋಟೆಲ್‌ಗೆ ತೆರಳಿದ್ದ ಅವರು, ಬಳಿಕ ಅಡುಗೆಮನೆಯಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಾಹಿತಿ ತಿಳಿದು ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಅಶೋಕನ್ ಹಲವು ವರ್ಷಗಳಿಂದ ಕುತ್ತಿಕೋಲಿನ ಸರ್ಕಾರಿ ಸ್ಥಳದಲ್ಲಿ ಸಣ್ಣ ಗಂಜಿ ಅಂಗಡಿ ನಡೆಸುತ್ತಿದ್ದರು. ನಾಟಕ ನಟರಾಗಿದ್ದ ಅವರು ಕಲೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದರು. ಸಾವಿಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಬೇಡಗಂ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮೃತರು ತಾಯಿ ನಾರಾಯಣಿ, ಪತ್ನಿ ಸಜಿತಾ (ಪಿಗ್ಮಿ ಕಲೆಕ್ಷನ್ ಏಜೆಂಟ್), ಮಕ್ಕಳಾದ ಉತ್ತರಾ (ಕುತ್ತಿಕೋಲು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ) ಹಾಗೂ ಅಕ್ಷರಾ (ಎ.ಯು.ಪಿ. ಶಾಲೆ, ಕುಟ್ಟಿಕೋಲು), ಸಹೋದರ-ಸಹೋದರಿಯರಾದ ಎ.ಟಿ. ವಿಜಯನ್, ರಮಣಿ ಹಾಗೂ ಬೇಬಿ ಅವರನ್ನು ಅಗಲಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement