Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ರ‍್ಯಾಂಕ್ ಪಟ್ಟಿ ಅವಧಿ ವಿಸ್ತರಣೆ; ಸರ್ಕಾರದ ಶಿಫಾರಸು ತಿರಸ್ಕರಿಸಿದ ಪಿಎಸ್‌ಸಿ

ತಿರುವನಂತಪುರ: ಸಾರ್ವಜನಿಕ ಶಿಕ್ಷಣ ಇಲಾಖೆಯ 18 ರ‍್ಯಾಂಕ್ ಪಟ್ಟಿಗಳ ಅವಧಿಯನ್ನು ವಿಸ್ತರಿಸುವ ಸರ್ಕಾರದ ಶಿಫಾರಸನ್ನು ಕೇರಳ ಸಾರ್ವಜನಿಕ ಸೇವಾ ಆಯೋಗ (ಪಿಎಸ್‌ಸಿ) ತಿರಸ್ಕರಿಸಿದೆ. ಒಂದೇ ಅವಧಿಯಲ್ಲಿ ಮುಕ್ತಾಯಗೊಳ್ಳುವ ರ‍್ಯಾಂಕ್ ಪಟ್ಟಿಗಳಲ್ಲಿ ನಿಗದಿತ ಕೆಲವು ಪಟ್ಟಿಗಳಿಗೆ ಮಾತ್ರ ಅವಧಿ ವಿಸ್ತರಿಸಲು ಸಾಧ್ಯವಿಲ್ಲ ಎಂಬುದು ಪಿಎಸ್‌ಸಿಯ ನಿಲುವಾಗಿದೆ. ಶಿಫಾರಸಿನಲ್ಲಿ ಕಾನೂನುಬದ್ಧ ತೊಡಕುಗಳಿವೆ ಎಂದು ಪಿಎಸ್‌ಸಿ ಸ್ಪಷ್ಟಪಡಿಸಿದೆ.

ನಿಗದಿತ ಅವಧಿಯಲ್ಲಿ ಮುಕ್ತಾಯಗೊಳ್ಳುವ ರ‍್ಯಾಂಕ್ ಪಟ್ಟಿಗಳಲ್ಲಿ ಕೆಲವು ಹುದ್ದೆಗಳಿಗೆ ಮಾತ್ರ ಅವಧಿ ವಿಸ್ತರಿಸಲು ನಿಯಮಗಳು ಅವಕಾಶ ನೀಡುವುದಿಲ್ಲ ಎಂದು ಪಿಎಸ್‌ಸಿ ತಿಳಿಸಿದೆ. ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರಲು ನಿನ್ನೆ ನಡೆದ ಪಿಎಸ್‌ಸಿ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸೆಪ್ಟೆಂಬರ್, ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಅವಧಿ ಮುಕ್ತಾಯಗೊಳ್ಳಲಿದ್ದ ರ‍್ಯಾಂಕ್ ಪಟ್ಟಿಗಳನ್ನು ವಿಸ್ತರಿಸಲು ಸರ್ಕಾರ ನಿರ್ಧರಿಸಿತ್ತು. ನೇಮಕಾತಿ ನಡೆಯುತ್ತಿಲ್ಲ ಎಂದು ಆರೋಪಿಸಿ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ ಬಳಿಕ ಸರ್ಕಾರ ಈ ನಿರ್ಧಾರ ಕೈಗೊಂಡಿತ್ತು.

ಆದರೆ ಕಾನೂನು ಸಮಸ್ಯೆಯನ್ನು ಮುಂದಿಟ್ಟುಕೊಂಡು ಪಿಎಸ್‌ಸಿ ಸರ್ಕಾರದ ಶಿಫಾರಸನ್ನು ತಿರಸ್ಕರಿಸಿರುವುದು ಉದ್ಯೋಗಾಕಾಂಕ್ಷಿಗಳಿಗೆ ದೊಡ್ಡ ಹಿನ್ನಡೆಯಾಗಿದೆ.

Post a Comment

0 Comments

ಜಾಹೀರಾತು

Responsive Advertisement