ಪೆರ್ಲ : ಬೆದ್ರಂಪಳ್ಳ ಶಾಲೆಯಲ್ಲಿ ವಿಶೇಷ ಸಬಲೀಕರಣ ಯೋಜನೆ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯ ಮಹೇಶ್ ಕುಮಾರ ಇಡ್ಯಾಲ ಅಧ್ಯಕ್ಷತೆ ವಹಿಸಿದ್ದರು. ಎಣ್ಮಕಜೆ ಗ್ರಾಮ ಪಂಚಾಯತ್ ವೆಲ್ಫೇರ್ ಸ್ಟಾಂಡಿಂಗ್ ಕಮಿಟಿ ಚೇರ್ಯಮೇನ್ ರಾಧಾಕೃಷ್ಣ ಜೆ ಎಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಅಶೋಕ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಈ ಯೋಜನೆಯ ಉದ್ದೇಶವಾಗಿದೆ ಎಂದರು. ಎಸ್ಇಪಿ ಕೋ- ಆರ್ಡಿನೇಟರ್ ಅಸ್ಲಾಮ್ ಸಿದ್ದಿಕ್ ಯೋಜನೆಯ ವಿವಿಧ ಹಂತಗಳನ್ನು ವಿವರಿಸಿದರು. ಶಾಲಾ ಪಿಟಿಎ ಅಧ್ಯಕ್ಷ ಕೃಷ್ಣ ನಾಯ್ಕ ಮಣಿಯಂಪಾರೆ ಉಪಸ್ಥಿತರಿದ್ದರು. ಶಿಲ್ಪ ಕೆ ಸ್ವಾಗತಿಸಿ, ಉಮಾವತಿ ಎಸ್ ವಂದಿಸಿದರು. ಸ್ವಾತಿ ಕೆ ವಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ರಕ್ಷಕ ಶಿಕ್ಷಕ ಸಂಘದ ಸದಸ್ಯರು, ವಿದ್ಯಾರ್ಥಿಗಳು ಭಾಗವಹಿಸಿದರು.

0 Comments