ಆದೂರು : ಕೈತ್ತೋಡು ಶ್ರೀ ಶಾರದಾಂಬಾ ಸೇವಾ ಸಮಿತಿ ವತಿಯಿಂದ 39ನೇ ನವರಾತ್ರಿ ಮಹೋತ್ಸವವು ಅ.11 ಆದಿತ್ಯವಾರದಿಂದ ಅ. 20 ಮಂಗಳವಾರದ ವರೆಗೆ ವಿವಿಧ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ನಡೆಯಿತು.
ನವರಾತ್ರಿ ಮಹೋತ್ಸವದಂಗವಾಗಿ ಅ.11 ರಂದು ಬೆಳಿಗ್ಗೆ ಶ್ರೀ ಗಣಪತಿ ಹವನ, ದೀಪ ಪ್ರತಿಷ್ಠೆ (ಉದಯ ಕುಂಜತ್ತಾಯ, ಬೆಳಿಂಜ ಇವರಿಂದ), ತೆನೆಕಟ್ಟುವ ಕಾರ್ಯಕ್ರಮ ಜರಗಲಿದೆ. ಬಳಿಕ ಪ್ರತಿದಿನ ರಾತ್ರಿ ಗಂಟೆ 7 ರಿಂದ 8.30ರ ತನಕ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ, ಮಂಗಳಾರತಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ ಜರಗಲಿದೆ. ಅ. 18 ರಂದು ಬೆಳಿಗ್ಗೆ ಗಂಟೆ 10ರಿಂದ ವಿವಿಧ ಸ್ಪರ್ಧೆಗಳು (ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ) ಜರಗಲಿದೆ.

0 Comments