Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಸೆ .10 ರಂದು ಮೀಯಪದವಿನಲ್ಲಿ ಎಸ್ .ವಿ ಭಟ್ ಸಂಸ್ಮರಣೆ ಮತ್ತು ಕವಿಗೋಷ್ಠಿ


 ಮಂಜೇಶ್ವರ : ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ನಿಕಟಪೂರ್ವ ಅಧ್ಯಕ್ಷ, ನಿವೃತ್ತ ಶಿಕ್ಷಣಾಧಿಕಾರಿ ಎಸ್.ವಿ.ಭಟ್ ಅವರ ಸಂಸ್ಮರಣಾ ಕಾರ್ಯಕ್ರಮ ಮತ್ತು ಕವಿಗೋಷ್ಠಿಯು ಮೀಯಪದವು ವಿದ್ಯಾವರ್ಧಕ ಉನ್ನತ ಪ್ರೌಢಶಾಲೆಯ ಸಭಾಂಗಣ 'ಕೇಶವಾಮೃತಮ್' ನಲ್ಲಿ ಸೆ.10ರಂದು ಸಂಜೆ 3.45 ಕ್ಕೆ ನಡೆಯುವುದು. ವಿದ್ಯಾವರ್ಧಕ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರಾಜಾರಾಮ ರಾವ್.  ಟಿ  ಸಂಸ್ಮರಣಾ ಭಾಷಣ ಮಾಡುವರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸುವರು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯಾಧ್ಯಕ್ಷ, ನಿವೃತ್ತ ಪ್ರಾಂಶುಪಾಲ ಪ್ರೊ. ಪಿ. ಎನ್ ಮೂಡಿತ್ತಾಯ ಮುಖ್ಯ ಅತಿಥಿಯಾಗಿರುವರು. ಹೈಯರ್ ಸೆಕೆಂಡರಿ ಪ್ರಾಂಶುಪಾಲ ರಮೇಶ್  ಕೆ.ಎನ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಮೃದುಲ.ಕೆ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ, ಪ್ರಾಧ್ಯಾಪಕ  ರವಿಲೋಚನ ಸಿ ಎಚ್,  ಶಿಕ್ಷಕಿ ಸಾವಿತ್ರಿ , ಪ್ರಾಧ್ಯಾಪಕ ಹರೀಶ್ .ಜಿ ಉಪಸ್ಥಿತರಿರುವರು.

ಬಳಿಕ ನಡೆಯುವ ' ಮಧುರ ಮಧುರವೀ ಕನ್ನಡ 'ಕವಿಗೋಷ್ಠಿಯಲ್ಲಿ ಸಾವಿತ್ರಿ. ಎಂ, ಅರುಣ ಕೆ.ಸಿ, ಲೋಕೇಶ್ .ಕೆ, ಹರೀಶ .ಜಿ, ಸುಧಾ ಕೆ.ಎಂ ,ರಾಜಾರಾಮ. ಪಿ, ಸಾನಿಧ್ಯ .ಇ, ವರ್ಷಿಕ ಶೆಟ್ಟಿ, ಸಾನ್ವಿ ,ಗೃತಿಕಾ, ಫಾತಿಮಾತ್ ಮನ್ಸೂರ, ಶಾರ್ವಿ. ಆರ್ , ಚಿಂತನ.ಕೆ, ಅದಿಶ, ಹರಿಸ್ಮಿತಾ.ಎನ್, ಸಾನಿಧ್ಯ ಭಟ್, ಆದಿರ ಪಿ.ಎಲ್ ಕವನ ವಾಚನ ಮಾಡುವರು.

Post a Comment

0 Comments

ಜಾಹೀರಾತು

Responsive Advertisement