Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಅಂಬೇಡ್ಕರ್ ವಿಚಾರ ವೇದಿಕೆಯಿಂದ ಅಧ್ಯಾಪಕರಿಗೆ ಗೌರವಾರ್ಪಣೆ

ಬದಿಯಡ್ಕ : ಅಧ್ಯಾಪಕರ ದಿನಾಚರಣೆಯ ಅಂಗವಾಗಿ ಬದಿಯಡ್ಕದಲ್ಲಿ ಅಂಬೇಡ್ಕರ್ ವಿಚಾರ ವೇದಿಕೆಯ ನೇತೃತ್ವದಲ್ಲಿ  ಅಧ್ಯಾಪಕರನ್ನು ಗೌರವಿಸುವ ಕಾರ್ಯಕ್ರಮ  ನಡೆಯಿತು.

ಪುತ್ತೂರಿನ ಕೆಯ್ಯೂರು ಸರಕಾರಿ ಪದವಿಪೂರ್ವ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕ ಬಾಲಕೃಷ್ಣ ಬೇರಿಕೆ, ಜಿ.ಎಚ್.ಎಸ್. ಪೆರಡಾಲ ಬದಿಯಡ್ಕದ ಅಧ್ಯಾಪಕ ರಾಜೇಶ್ ಉಬ್ರಂಗಳ, ಜಿ.ಬಿ.ಯು.ಪಿ. ಶಾಲೆ ಪಿಲಾಂಕಟ್ಟೆಯ ಅಧ್ಯಾಪಿಕೆ ಓಮನಾ ಹಾಗೂ ಅಡೂರು ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಮಂಜುಳಾ ಅವರನ್ನು ವೇದಿಕೆಯ ವತಿಯಿಂದ ಗೌರವಿಸಲಾಯಿತು.

ಹಿರಿಯ ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಅಂಬೇಡ್ಕರ್ ವಿಚಾರ ವೇದಿಕೆಯ ಸ್ಥಾಪಕ ಅಧ್ಯಕ್ಷ  ನಾರಾಯಣ ಬಾರಡ್ಕ, ಬದಿಯಡ್ಕ ಗ್ರಾಮ ಪಂಚಾಯತ್ ಸದಸ್ಯ ಗಂಗಾಧರ ಗೋಳಿಯಡ್ಕ, ನಿವೃತ್ತ ಅಧ್ಯಾಪಿಕೆ ಸುನಂದಾ ಟೀಚರ್, ಪ್ರಗತಿ ವಿಶೇಷ ಚೇತನ ಶಾಲೆಯ ಆಡಳಿತಾಧಿಕಾರಿ ಉದಯಕುಮಾರ್ ಎಂ., ಕವಯತ್ರಿ ವನಜಾಕ್ಷಿ ಚೆಂಬ್ರಕಾನ ಮೊದಲಾದವರು ಉಪಸ್ಥಿತರಿದ್ದರು. ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಸುಂದರ ಬಾರಡ್ಕ ವಂದಿಸಿದರು.

Post a Comment

0 Comments

ಜಾಹೀರಾತು

Responsive Advertisement