Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ನಾಟಿ ಮೀನುಗಾರಿಕೆ ವೀಡಿಯೊಗಳಿಂದ ಜನಪ್ರಿಯಳಾಗಿದ್ದ ಯೂಟ್ಯೂಬರ್ ಮೃತದೇಹ ಪತ್ತೆ

ಕೊಟ್ಟಾಯಂ : ನಾಟಿ ಮೀನುಗಾರಿಕೆ ವಿಧಾನಗಳ ಕುರಿತ ವೀಡಿಯೊಗಳ ಮೂಲಕ ಗಮನ ಸೆಳೆದಿದ್ದ ಯೂಟ್ಯೂಬರ್ ತಂಬುರು (36) ಅವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವೈಕಂ ಚೆಂಬ್ ಕಾಟಿಕ್ಕುನ್ನು ತುರತ್ತ್ ನಿವಾಸಿಯಾಗಿದ್ದ ತಂಬುರು ಅವರನ್ನು ಪುಳಿಂಚುವಟ್ಟಿಯಲ್ಲಿರುವ ಬಾಡಿಗೆ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ ಮಾಡಲಾಗಿದೆ.

‘ತಂಬುರು ಕ್ವೀನ್‌ಫಿಷರ್’ ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಅವರು ಜನಪ್ರಿಯರಾಗಿದ್ದರು. ಸಾಂಪ್ರದಾಯಿಕ ವಿಧಾನಗಳಲ್ಲಿ ಮೀನು ಹಿಡಿಯುವುದು ಹಾಗೂ ಮೀನುಗಾರಿಕೆಗೆ ಸಂಬಂಧಿಸಿದ ಅನುಭವಗಳೇ ಅವರ ವ್ಲಾಗ್‌ಗಳ ಪ್ರಮುಖ ವಿಷಯವಾಗಿದ್ದವು. ಸಾಮಾಜಿಕ ಜಾಲತಾಣಗಳಲ್ಲೂ ಅವರ ವೀಡಿಯೊಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿತ್ತು.

ತಂಬುರು ಅವರು ವಿಚ್ಛೇದಿತರಾಗಿದ್ದು, 13 ವರ್ಷದ ಪುತ್ರಿಯೊಂದಿಗೆ ಪುಳಿಂಚುವಟ್ಟಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಪುತ್ರಿ ಶಾಲೆಯಿಂದ ಸಂಜೆ ಮನೆಗೆ ಮರಳಿದಾಗ ತಾಯಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಕುಟುಂಬದ ಸಮಸ್ಯೆಗಳೇ ಸಾವಿಗೆ ಕಾರಣವಾಗಿರಬಹುದು ಎಂಬುದು ಪ್ರಾಥಮಿಕ ಮಾಹಿತಿ. ಮಾಹಿತಿ ತಿಳಿದು ವೈಕಂ ಪೊಲೀಸರು ಸ್ಥಳಕ್ಕೆ ಆಗಮಿಸಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಿಸಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement