ಮುಳ್ಳೇರಿಯ: ಕೋಳಿ ಗೂಡಿಗೆ ನುಗ್ಗಿದ ಬೃಹತ್ ಗಾತ್ರದ ಹೆಬ್ಬಾವೊಂದು ಮೂರು ಕೋಳಿಗಳು ಹಾಗೂ ಎಂಟು ಮೊಟ್ಟೆಗಳನ್ನು ನುಂಗಿದ ಘಟನೆ ಮುಳ್ಳೇರಿಯ ಸಮೀಪದ ಪಡುಪ್ಪೆಯಲ್ಲಿ ನಡೆದಿದೆ.
ಪಡುಪ್ಪೆಯ ಹಮೀದ್ ಕಂಡತ್ತಿಲ್ ಅವರ ಮನೆಯ ಕೋಳಿ ಗೂಡಿಗೆ ಇಂದು ಸಂಜೆ ಬೃಹತ್ ಹೆಬ್ಬಾವು ನುಗ್ಗಿತ್ತು. ಗೂಡಿನಲ್ಲಿದ್ದ ಮೂರು ಕೋಳಿಗಳು ಹಾಗೂ ಎಂಟು ಮೊಟ್ಟೆಗಳನ್ನು ಹೆಬ್ಬಾವು ನುಂಗಿತ್ತು.
ಘಟನೆ ಗಮನಕ್ಕೆ ಬಂದ ಬಳಿಕ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿದರು. ಬಳಿಕ ಹೆಬ್ಬಾವನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದು ಬಿಡಲಾಯಿತು.

0 Comments