ಬದಿಯಡ್ಕ: ಮಾಜಿ ಶಾಸಕ ಹಾಗೂ ಡಿಸಿಸಿ ಅಧ್ಯಕ್ಷರಾಗಿದ್ದ ಕೆ.ಪಿ. ಕುಂಞಿಕ್ಕಣ್ಣನ್ ಅವರ ಎರಡನೇ ಪುಣ್ಯತಿಥಿಯ ಅಂಗವಾಗಿ ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಪುಷ್ಪಾರ್ಚನೆ ಹಾಗೂ ಸಂಸ್ಮರಣಾ ಸಭೆ ನಡೆಯಿತು.
ಕುಂಞಿಕ್ಕಣ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ನಡೆದ ಅನುಸ್ಮರಣಾ ಸಭೆಯನ್ನು ಡಿಸಿಸಿ ಪ್ರಧಾನ ಕಾರ್ಯದರ್ಶಿ ವಾರಿಜಾಕ್ಷನ್ ಕೆ. ಉದ್ಘಾಟಿಸಿದರು. ಜಿಲ್ಲೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಕಟ್ಟಿಬೆಳೆಸುವಲ್ಲಿ ಕೆ.ಪಿ. ಕುಂಞಿಕ್ಕಣ್ಣನ್ ಅವರು ನಿರ್ಣಾಯಕ ಪಾತ್ರ ವಹಿಸಿದ ನಾಯಕರಾಗಿದ್ದರು. ಪಕ್ಷದ ಸಂಘಟನೆ ಹಾಗೂ ಸಾರ್ವಜನಿಕ ಸೇವೆಯಲ್ಲಿ ಅವರು ಸಲ್ಲಿಸಿದ ಕೊಡುಗೆ ಸ್ಮರಣೀಯವಾಗಿದೆ ಎಂದು ಅವರು ಹೇಳಿದರು.
ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ಯಾಮಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದ್ದರು. ಸೇವಾದಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀತಾಂಬರನ್, ಹಿರಿಯ ನಾಯಕರಾದ ಪಿ.ಜಿ. ಚಂದ್ರಹಾಸ ರೈ, ಕುಂಜಾರ್ ಮೊಹಮ್ಮದ್ ಹಾಜಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಗಂಗಾಧರ ಗೋಳಿಯಡ್ಕ, ಬ್ಲಾಕ್ ಕಾರ್ಯದರ್ಶಿ ರಾಮಪಟ್ಟಾಜೆ, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಾಥ್ ಬದಿಯಡ್ಕ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.
ಮಂಡಲ ನಾಯಕರಾದ ಲೋಹಿತಾಕ್ಷನ್ ನಾಯರ್, ಖಾದರ್ ಮಾನ್ಯ, ಗೋಪಾಲ ಡಿ., ಕುಮಾರನ್ ನಾಯರ್, ಅಬೂಬಕರ್ ಬಣಪತ್ತಡ್ಕ, ಸತೀಶ್ ಪೆರ್ಮುಂಡೆ, ಮೊಹಮ್ಮದ್, ಲೀಲಾವತಿ, ನಳಿನಿ ಪಟ್ಟಾಜೆ, ಹೈಮಾವತಿ, ಲೀಲಾವತಿ ಪಟ್ಟಾಜೆ, ರಾಮಕೃಷ್ಣನ್, ಖಮರುದ್ದೀನ್, ದಿವಾಕರ, ಸುಂದರ, ಕೃಷ್ಣಕುಮಾರ್, ಜ್ಯೋತಿ ಲಕ್ಷ್ಮಿ, ಸುಜಾತ, ವನಜ ಸೇರಿದಂತೆ ಹಲವರು ಭಾಗವಹಿಸಿದ್ದರು.

0 Comments