Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕ್ಯಾಲಿಫೋರ್ನಿಯಾದಲ್ಲಿ ಹತ್ಯೆಯಾದ ಇಬ್ಬರು ಯುವತಿಯರ ಪಾರ್ಥಿವ ಶರೀರ ಕೊಚ್ಚಿಗೆ

ಕೊಚ್ಚಿ : ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಹತ್ಯೆಗೀಡಾದ ಇಬ್ಬರು ಕೇರಳ ಮೂಲದ ಯುವತಿಯರ ಪಾರ್ಥಿವ ಶರೀರಗಳನ್ನು ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಗಿದ್ದು, ಸಂಬಂಧಿಕರು ಸ್ವೀಕರಿಸಿದ್ದಾರೆ.

ತಿರುವನಂತಪುರಂ ಕೇಶವದಾಸಪುರಂ ಕಾಕನಾಡ್ ಲೇನ್ ನಿವಾಸಿ ಆನ್ ಮೇರಿ ಮ್ಯಾಥ್ಯೂ (40) ಹಾಗೂ ತ್ರಿಶೂರ್ ಮುಡಿಕ್ಕೋಡ್ ತೆಕ್ಕೂಟ್ ಅಂಜನಾ ಹರಿ (35) ಅವರ ಪಾರ್ಥಿವ ಶರೀರಗಳು ಬೆಳಗ್ಗೆ 10ರ ಸುಮಾರಿಗೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ತಲುಪಿದವು.

ಅಂಜನಾ ಅವರ ಪಾರ್ಥಿವ ಶರೀರವನ್ನು ಮೊದಲು ಪೀಚಿಯಲ್ಲಿರುವ ಪತಿಯ ಮನೆಗೆ ಕೊಂಡೊಯ್ಯಲಾಗುತ್ತದೆ. ಬಳಿಕ ಮುಡಿಕ್ಕೋಡ್‌ನಲ್ಲಿರುವ ಸ್ವಗೃಹಕ್ಕೆ ಕೊಂಡೊಯ್ಯಲಿದ್ದು, ಇಂದು ಮಧ್ಯಾಹ್ನದ ಬಳಿಕ ಅಂತ್ಯಕ್ರಿಯೆ ನಡೆಯಲಿದೆ.

ಆನ್ ಮೇರಿ ಅವರ ಪಾರ್ಥಿವ ಶರೀರವನ್ನು ಪತಿ ಪಳ್ಳತ್ರ ಜೇಕಬ್ ಆಂಡ್ರ್ಯೂಸ್ ಅವರ ಸ್ವಗ್ರಾಮಕ್ಕೆ ಕೊಂಡೊಯ್ಯಲಾಗುತ್ತದೆ. ಸೇಂಟ್ ಇಗ್ನೇಷಿಯಸ್ ಯಾಕೋಬಾಯ ಚರ್ಚ್‌ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಿದ ಬಳಿಕ ನಾಳೆ ಅಂತ್ಯಕ್ರಿಯೆ ನಡೆಯಲಿದೆ.

ಕಳೆದ ತಿಂಗಳ 28ರಂದು ಕ್ಯಾಲಿಫೋರ್ನಿಯಾದಲ್ಲಿ ಇಬ್ಬರೂ ಹತ್ಯೆಗೀಡಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಸ್ನೇಹಿತೆ ಹಾಗೂ ಕೋಟಯಂ ಈರಾಟ್ಟುಪೇಟ ನಿವಾಸಿ ಅನಿಲಾ ಬೇಬಿ ಪ್ರಸ್ತುತ ಜೈಲಿನಲ್ಲಿದ್ದಾರೆ.

ಮರಣೋತ್ತರ ಪರೀಕ್ಷೆ, ಇನ್‌ಕ್ವೆಸ್ಟ್ ಸೇರಿದಂತೆ ಅಮೆರಿಕದಲ್ಲಿ ಪೂರ್ಣಗೊಳಿಸಬೇಕಿದ್ದ ಕಾನೂನು ಪ್ರಕ್ರಿಯೆಗಳಿಂದಾಗಿ ಪಾರ್ಥಿವ ಶರೀರಗಳನ್ನು ಭಾರತಕ್ಕೆ ತರಲು ವಿಳಂಬವಾಗಿದೆ ಎಂದು ತಿಳಿದುಬಂದಿದೆ. ಇಬ್ಬರ ಹತ್ಯೆಗೆ ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

Post a Comment

0 Comments

ಜಾಹೀರಾತು

Responsive Advertisement