ಕಾಸರಗೋಡು : ಬಿಜೆಪಿಯ ಕಾಸರಗೋಡು ಜಿಲ್ಲೆಯ ಪ್ರಮುಖ ಕಾರ್ಯಕರ್ತರಿಗಾಗಿ ಆಯೋಜಿಸಿರುವ ಬಿಜೆಪಿ ಜಿಲ್ಲಾ ದೀನ್‌ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಅಭಿಯಾನ (ಅಧ್ಯಯನ ಶಿಬಿರ) ಇಂದು ಚಾಲನೆ ಚೀಮೇನಿಯಲ್ಲಿ ಆರಂಭವಾಗಲಿದೆ.
ಸೆ.25ರ ಸಂಜೆ 5 ಗಂಟೆಗೆ ಆರಂಭವಾಗುವ ಶಿಬಿರವು ಸೆ.27ರ ಸಂಜೆ 5 ಗಂಟೆಗೆ ಸಮಾರೋಪಗೊಳ್ಳಲಿದೆ. ಚೀಮೇನಿ ಕನಿಯಂತೋಳ್ ಟ್ರೀಹುಡ್ ರಿಸಾರ್ಟ್‌ನಲ್ಲಿ ಮೂರು ದಿನಗಳ ಕಾಲ ಶಿಬಿರ ನಡೆಯಲಿದೆ.
ಸೆ.25ರ ಸಂಜೆ 6 ಗಂಟೆಗೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ. ಕೃಷ್ಣದಾಸ್ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಮೂರು ದಿನಗಳ ಕಾಲ ವಿವಿಧ ವಿಷಯಗಳ ಕುರಿತು ತಜ್ಞರು ತರಗತಿಗಳನ್ನು ನಡೆಸಲಿದ್ದಾರೆ.

0 Comments