Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಹಿಂದೂಸ್ತಾನ್ ವಾಟ್ಸಾಪ್ ಗ್ರೂಪ್‌ನ 11ನೇ ವರ್ಷದ ಸಂಭ್ರಮ : ಬ್ರಹ್ಮಶ್ರೀ ಮಾಯಿಪ್ಪಾಡಿ ಮಾಧವ ಆಚಾರ್ಯರಿಗೆ ಗೌರವಾರ್ಪಣೆ

ಕಾಸರಗೋಡು :  ಕಾಸರಗೋಡಿನ ಖ್ಯಾತ  ಮೈಕ್ರೋ ಆರ್ಟಿಸ್ಟ್ ವೆಂಕಟೇಶ್ ಪುಟ್ಟ ಸಮಾನ ಮನಸ್ಕರ ಜತೆಗೂಡಿ ಸಮಾಜಮುಖಿ ಕಾರ್ಯಗಳ ಪ್ರೋತ್ಸಾಹಕ್ಕಾಗಿ 2015ರಲ್ಲಿ ಪ್ರಾರಂಭಿಸಿದ ಹಿಂದೂಸ್ತಾನ್ ವಾಟ್ಸಾಪ್ ಗ್ರೂಪ್ ಇದೀಗ  10ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ 11ನೇ ವರ್ಷದ ಸಂಭ್ರಮ ಆಚರಣೆಯಲ್ಲಿದೆ. ಇದರ ಅಂಗವಾಗಿ ವಿಶ್ವಕರ್ಮ ಸಮಾಜದ ಪುರೋಹಿತರೂ, ತಂತ್ರಿವರ್ಯರೂ ಆದ ಬ್ರಹ್ಮಶ್ರೀ ಮಾಧವ ಆಚಾರ್ಯ, ಮಾಯಿಪ್ಪಾಡಿ ಅವರ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಗೌರವಿಸಲಾಯಿತು.

ಸನಾತನ ಧರ್ಮದ ವೈದಿಕ ಪರಂಪರೆ, ಆಧ್ಯಾತ್ಮಿಕ ಸಂಸ್ಕೃತಿ ಹಾಗೂ ಸಮಾಜದ ಧಾರ್ಮಿಕ ಸೇವೆಗೆ ಮಾಧವ ಆಚಾರ್ಯರು ತಮ್ಮ ಜೀವನವನ್ನು ಸಮರ್ಪಿಸಿಕೊಂಡಿದ್ದಾರೆ. ಅವರು ವೈದಿಕ, ಧಾರ್ಮಿಕ ಹಾಗೂ ತಾಂತ್ರಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಾಯಿಪ್ಪಾಡಿಯಲ್ಲಿ ಶ್ರೀ ಆದಿಪರಾಶಕ್ತಿ ಕ್ಷೇತ್ರವನ್ನು ಸ್ಥಾಪಿಸಿ, ಹಲವು ದಶಕಗಳಿಂದ ಭಕ್ತಿ, ಧರ್ಮ ಮತ್ತು ಸಮಾಜಸೇವೆಯ ಮೂಲಕ ಅನೇಕರಿಗೆ ದಾರಿದೀಪವಾಗಿದ್ದಾರೆ.

ವಿವಿಧ ದೇವಾಲಯಗಳ ಪ್ರತಿಷ್ಠೆ, ಬ್ರಹ್ಮಕಲಶ, ತಾಂತ್ರಿಕ ಹಾಗೂ ವೈದಿಕ ಧಾರ್ಮಿಕ ವಿಧಿವಿಧಾನಗಳಲ್ಲಿ ಸೇವೆ ಸಲ್ಲಿಸಿರುವ ಇವರ ಸಾಧನೆ ಗುರುತಿಸಿ  ಹಿಂದೂಸ್ಥಾನ್ ವಾಟ್ಸಫ್ ಬಳಗದವರು ಅವರ ಮನೆಗೆ ತೆರಳಿ ಗೌರವಿಸಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement