ತ್ರಿಕ್ಕರಿಪ್ಪುರ : ರಾಜ್ಯ ಶಾಲಾ ಕ್ರೀಡಾಕೂಟದ 2ನೇ ಹಂತದ ಸ್ಪರ್ಧೆಗಳ ಸಮಾರೋಪ ದಿನ ನಡೆದ ಕೊನೆಯ ಸ್ಪರ್ಧೆಯಾದ ಹಿರಿಯ ಬಾಲಕರ ಕಬಡ್ಡಿಯಲ್ಲಿ ಆತಿಥೇಯ ಕಾಸರಗೋಡು ಜಿಲ್ಲೆ ಚಾಂಪಿಯನ್ ಆಯಿತು. ಫೈನಲ್ ಪಂದ್ಯದಲ್ಲಿ ಕಾಸರಗೋಡು ತಂಡವು ಕೋಝಿಕ್ಕೋಡ್ ಜಿಲ್ಲೆಯನ್ನು ಸೋಲಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಮಲಪ್ಪುರಂ ಜಿಲ್ಲೆ ಮೂರನೇ ಸ್ಥಾನ ಪಡೆಯಿತು.
ಕಬಡ್ಡಿಯಲ್ಲಿ ಕಾಸರಗೋಡಿನ ಎಂ. ಶ್ರೀರಾಗ್ ಅವರನ್ನು ಅತ್ಯುತ್ತಮ ಆಟಗಾರರಾಗಿ ಹಾಗೂ ಕೋಝಿಕ್ಕೋಡಿನ ಡಿ.ಎಲ್. ಹರಿದೇವ್ ಅವರನ್ನು ಭರವಸೆಯ ಆಟಗಾರರಾಗಿ ಆಯ್ಕೆ ಮಾಡಲಾಯಿತು.
ಹಿರಿಯ ಬಾಲಕಿಯರ ವಿಭಾಗದಲ್ಲಿ ತೃಶ್ಯೂರ್ ಜಿಲ್ಲೆ ಪ್ರಥಮ ಸ್ಥಾನ ಪಡೆದರೆ, ಕೋಝಿಕ್ಕೋಡ್ ದ್ವಿತೀಯ ಹಾಗೂ ಕೊಲ್ಲಂ ಜಿಲ್ಲೆ ತೃತೀಯ ಸ್ಥಾನ ಗಳಿಸಿತು. ತೃಶ್ಯೂರಿನ ಕೆ.ಎಸ್. ಸಾಂದ್ರಾ ಅತ್ಯುತ್ತಮ ಆಟಗಾರ್ತಿಯಾಗಿ ಹಾಗೂ ಕೋಝಿಕ್ಕೋಡಿನ ಪಿ.ಎಂ. ಫಾತಿಮಾ ನೂರಾ ಭರವಸೆಯ ಆಟಗಾರ್ತಿಯಾಗಿ ಆಯ್ಕೆಯಾದರು.
ಸಮಾರೋಪ ಸಮಾರಂಭವನ್ನು ಶಾಸಕ ಸಂದೀಪ್ ವಾರಿಯರ್ ಉದ್ಘಾಟಿಸಿದರು. ಪಂಚಾಯತ್ ಅಧ್ಯಕ್ಷೆ ಸಾಜಿದ ಸಫರುಲ್ಲಾ ಅಧ್ಯಕ್ಷತೆ ವಹಿಸಿದ್ದರು.

0 Comments