ಚೆರ್ಕಳ : ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಹಾಗೂ ಕಿಶೋರಿಯರ ಪೌಷ್ಟಿಕ ಸ್ಥಿತಿಯನ್ನು ಸುಧಾರಿಸುವ ಉದ್ದೇಶದಿಂದ ಕಾಸರಗೋಡು ಹೆಚ್ಚುವರಿ ಐಸಿಡಿಎಸ್ ಯೋಜನಾ ಮಟ್ಟದ ‘ಪೋಷಣ್ ಮಾ’ ಕಾರ್ಯಕ್ರಮಗಳಿಗೆ ಚೆರ್ಕಳದಲ್ಲಿ ಚಾಲನೆ ನೀಡಲಾಯಿತು.
ಆಹಾರ, ಪೌಷ್ಟಿಕಾಂಶ, ಸ್ವಚ್ಛತೆ ಹಾಗೂ ಆರೋಗ್ಯ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಒಂದು ತಿಂಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಾಸರಗೋಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಎಂ. ಅಬ್ದುಲ್ಲ ಕುಂಞಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಚೆಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತ ಅಜಕ್ಕೋಡು ಅಧ್ಯಕ್ಷತೆ ವಹಿಸಿದ್ದರು.
ಕಾಸರಗೋಡು ಬ್ಲಾಕ್ ಪಂಚಾಯತ್ ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಮರಿಯಂ ಮಾಹಿನ್ ಹಾಗೂ ರಾಜೇಶ್ ಮಾಸ್ಟರ್ ಶುಭ ಹಾರೈಸಿದರು. ಚೆರ್ಕಳ ಸರ್ಕಾರಿ ಹೈಸ್ಕೂಲ್ ಮುಖ್ಯ ಶಿಕ್ಷಕಿ ಸುಬೈದಾ ಸಹಿ ಅಭಿಯಾನಕ್ಕೆ ಚಾಲನೆ ನೀಡಿದರು.
ಕಾಸರಗೋಡು ಹೆಚ್ಚುವರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಕೆ. ಶ್ರೀಲತಾ ಪೋಷಣ್ ಪ್ರತಿಜ್ಞೆ ಬೋಧಿಸಿದರು. ಚೆಂಗಳ ಕುಟುಂಬ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜಯಂತಿ ಪೋಷಣ್ ಜಾಗೃತಿ ತರಗತಿ ನಡೆಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತ ಅಜಕ್ಕೋಡು ಪೋಷಣ್ ಪೂಕಳಂನಲ್ಲಿ ದೀಪ ಬೆಳಗಿಸಿದರು.
ಕಾರ್ಯಕ್ರಮದ ಅಂಗವಾಗಿ ಪೋಷಣ್ ಫ್ಯಾನ್ಸಿ ಡ್ರೆಸ್, ಪೋಷಣ್ ಒಪ್ಪನ, ಪೋಷಣ್ ತಿರುವಾದಿರ ಹಾಗೂ ಪೋಷಣ್ ಗೀತೆಗಳ ಪ್ರದರ್ಶನ ನಡೆಯಿತು.

0 Comments