ಕಾಸರಗೋಡು: ಭಾರತೀಯ ಮಜ್ದೂರ್ ಸಂಘದ (ಬಿಎಂಎಸ್) ದ್ವಿದಿನ ಜಿಲ್ಲಾ ಸಮ್ಮೇಳನಕ್ಕೆ ಭವ್ಯ ಮೆರವಣಿಗೆಯೊಂದಿಗೆ ಚಾಲನೆ ದೊರೆಯಿತು. ಕಾಸರಗೋಡು ಹೊಸ ಬಸ್ ನಿಲ್ದಾಣದ ಪರಿಸರದಿಂದ ಆರಂಭವಾದ ಮೆರವಣಿಗೆಯಲ್ಲಿ ಜಿಲ್ಲೆಯ 38 ಪಂಚಾಯತ್ಗಳು ಹಾಗೂ ಮೂರು ನಗರಸಭೆಗಳ ವ್ಯಾಪ್ತಿಯಿಂದ ಸುಮಾರು 10 ಸಾವಿರ ಕಾರ್ಮಿಕರು ಭಾಗವಹಿಸಿದರು.
ಕಾಸರಗೋಡು ಹಳೆಯ ಬಸ್ ನಿಲ್ದಾಣ, ಟ್ರಾಫಿಕ್ ಜಂಕ್ಷನ್ ಹಾಗೂ ಬ್ಯಾಂಕ್ ರಸ್ತೆಯ ಮೂಲಕ ಸಾಗಿದ ಮೆರವಣಿಗೆ ಕರಂದಕ್ಕಾಡಿನಲ್ಲಿ ಸಮಾಪನಗೊಳ್ಳಲಿದೆ. ಬಳಿಕ ನಡೆಯುವ ಸಾರ್ವಜನಿಕ ಸಭೆಯನ್ನು ಬಿಎಂಎಸ್ ರಾಜ್ಯ ಕಾರ್ಯದರ್ಶಿ ಕೆ.ವಿ. ಮಧುಕುಮಾರ್ ಉದ್ಘಾಟಿಸಲಿದ್ದಾರೆ. ಜಿಲ್ಲಾ ಅಧ್ಯಕ್ಷ ಕೆ. ಉಪೇಂದ್ರನ್ ಅಧ್ಯಕ್ಷತೆ ವಹಿಸಲಿದ್ದಾರೆ.
ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು, ರಾಜ್ಯ ಉಪ ಪ್ರಧಾನ ಕಾರ್ಯದರ್ಶಿ ಬಾಲಚಂದ್ರನ್ ಹಾಗೂ ರಾಜ್ಯ ಉಪಾಧ್ಯಕ್ಷ ಮುರಳೀಧರನ್ ಸೇರಿದಂತೆ ಹಲವು ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಸಮ್ಮೇಳನದ ಪ್ರತಿನಿಧಿ ಸಭೆಯು ನಾಳೆ ಬೆಳಿಗ್ಗೆ 10 ಗಂಟೆಗೆ ಕಾಸರಗೋಡು ಹೊಸ ಬಸ್ ನಿಲ್ದಾಣದ ಸಮೀಪದ ಆರ್.ಕೆ. ಮಾಲ್ನಲ್ಲಿ ನಡೆಯಲಿದೆ.
.jpeg)

0 Comments