ಮಾನ್ಯ : ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಜರಗಲಿರುವ ತಿರುವಿಳಕ್ಕ್ ಮಹೋತ್ಸವ ಪ್ರಯುಕ್ತ ಶ್ರೀ ಅಯ್ಯಪ್ಪ ಸೇವಾ ಸಂಘದ ವತಿಯಿಂದ ನಡೆಸಲಾದ ಸೇವಾ ನಿಧಿ ಲಕ್ಕಿ ಕೂಪನ್‌ನ ಬಂಪರ್ ಬಹುಮಾನದ ವಿಜೇತರಾದ ವೆಂಕಪ್ಪ ನಾಯ್ಕ್ ಕೊಲ್ಲಂಗಾನ ಇವರಿಗೆ ಬಹುಮಾನವನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಂದಿರದ ಪ್ರಧಾನ ಗುರುಸ್ವಾಮಿಗಳಾದ ಕುಂಞಿಕಣ್ಣ ಗುರುಸ್ವಾಮಿ, ಮಧುಸೂದನ, ಗಣೇಶ್ ಕೊಲ್ಲಂಗಾನ, ತಿರುವಿಳಕ್ಕ್ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಕೃಷ್ಣಕುಮಾರ್, ಕಾರ್ಯದರ್ಶಿ ಸತ್ಯನಾರಾಯಣ, ಹರಿಪ್ರಸಾದ್ ಸಿ ಎಚ್, ಮಂದಿರದ ಸೇವಾ ಸಮಿತಿಯ ಅಧ್ಯಕ್ಷರಾದ ಮಂಜುನಾಥ ಡಿ ಮಾನ್ಯ, ಸೇವಾ ಸಮಿತಿ ಸದಸ್ಯರು, ಮುಂತಾದವರು ಉಪಸ್ಥಿತರಿದ್ದರು.

0 Comments