ಇಡುಕ್ಕಿ : ಸಿಪಿಎಂನ ಮಾಜಿ ನಾಯಕ ಹಾಗೂ ದೇವಿಕುಳಂ ಕ್ಷೇತ್ರದ ಮಾಜಿ ಶಾಸಕ ಎಸ್. ರಾಜೇಂದ್ರನ್ ಅವರು ಆರ್‌ಎಸ್‌ಎಸ್ ಗಣವೇಷ ಧರಿಸಿ ವಿಜಯದಶಮಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಮೂನ್ನಾರ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಅವರು ಆರ್‌ಎಸ್‌ಎಸ್ ಸಮವಸ್ತ್ರದಲ್ಲಿ ಆಗಮಿಸಿದ್ದರು. ವಿಜಯದಶಮಿ ಆಚರಣೆಯ ಅಂಗವಾಗಿ ಆರ್‌ಎಸ್‌ಎಸ್ ಮುಖವಾಣಿ ‘ಕೇಸರಿ’ ವಾರಪತ್ರಿಕೆಯ ಪ್ರಚಾರ ಅಭಿಯಾನಕ್ಕೂ ಎಸ್. ರಾಜೇಂದ್ರನ್ ಚಾಲನೆ ನೀಡಿದರು.
ದೇವಿಕುಳಂ ವಿಧಾನಸಭಾ ಕ್ಷೇತ್ರದಿಂದ ಸಿಪಿಎಂ ಅಭ್ಯರ್ಥಿಯಾಗಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ರಾಜೇಂದ್ರನ್, ಪಕ್ಷದ ಹಿರಿಯ ನಾಯಕರಾಗಿದ್ದರು. ದೀರ್ಘಕಾಲ ಸಿಪಿಎಂನಲ್ಲಿ ಸಕ್ರಿಯರಾಗಿದ್ದ ಅವರು ಬಳಿಕ ಪಕ್ಷದ ನಾಯಕತ್ವದಿಂದ ದೂರವಾಗಿ ಬಿಜೆಪಿ ಸೇರಿದ್ದರು.
ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ದೇವಿಕುಳಂ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಹಲವು ವರ್ಷಗಳ ಕಾಲ ಎಡಪಂಥೀಯ ರಾಜಕೀಯದಲ್ಲಿ ಸಕ್ರಿಯರಾಗಿದ್ದ ರಾಜೇಂದ್ರನ್ ಇದೀಗ ಆರ್‌ಎಸ್‌ಎಸ್ ಗಣವೇಷದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಕೇರಳದ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

0 Comments