ಕಾಸರಗೋಡು : ವಿಶ್ವ ಹೆಣ್ಣು ಮಕ್ಕಳ ದಿನಾಚರಣೆಯನ್ನು ಕಾಸರಗೋಡು ಜಿಲ್ಲಾಧಿಕಾರಿ ಧನ್ಯಾ ಸುರೇಶ್ ಅವರು ತಮ್ಮ ಕಚೇರಿಯಲ್ಲಿ ಪ್ರಗತಿ ವಿಶೇಷ ವಿಕಲಚೇತನ ಶಾಲೆಯ ಮಕ್ಕಳ ಜೊತೆಗೆ ಆಚರಿಸಿದರು. ಮಕ್ಕಳೊಂದಿಗೆ ಒಬ್ಬರಾಗಿ ಬೆರೆತು ವಿವಿಧ ವಿಷಯಗಳೊಂದಿಗೆ ಸಂವಾದ ನಡೆಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿತಿನ್ ರಾಜ್ ಐಪಿಎಸ್, ಎಎಸ್ ಪಿ ಅಚ್ಯುತ್, ಅಶೋಕ್ ಐಪಿಎಸ್, ಪ್ರಗತಿ ಶಾಲಾ ಟ್ರಸ್ಟಿನ ಉಪಾಧ್ಯಕ್ಷರಾದ ಅಶೋಕ ರೈ ಎಂ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿಗಳು ಮಕ್ಕಳಿಗೆ ಸಿಹಿತಿಂಡಿ ಹಂಚಿ ಬೀಳ್ಕೊಟ್ಟರು.
ಶಾಲಾ ಮುಖ್ಯೋಪಾಧ್ಯಾಯರಾದ ಉದಯಕುಮಾರ್ ಸ್ವಾಗತಿಸಿ, ಶಾಲೆಯ ಕಾರ್ಯಚಟುವಟಿಕೆಗಳ ಕಿರು ಪರಿಚಯ ನೀಡಿದರು ಅಧ್ಯಾಪಿಕೆ ಅಶ್ವತಿ ವಂದಿಸಿದರು.


.jpeg)
0 Comments