Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕುಂಬಳೆ ಪೇಟೆಯಲ್ಲಿ ಕಾರು ಡಿಕ್ಕಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಕಳತ್ತೂರಿನ ಗೃಹಿಣಿ ನಿಧನ

ಕುಂಬಳೆ : ಕಾರು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಗೃಹಿಣಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಇಚ್ಲಂಪಾಡಿ ಕಳತ್ತೂರು ನಿವಾಸಿ ಚನಿಯಪ್ಪ ಪೂಜಾರಿ ಅವರ ಪತ್ನಿ ಲಕ್ಷ್ಮೀ (69) ನಿಧನರಾದರು. ಕಳೆದ ಆಗಸ್ಟ್ 14ರಂದು ಕುಂಬಳೆ ಪೇಟೆಯಲ್ಲಿ ಲಕ್ಷ್ಮೀ ಅವರಿಗೆ ಕಾರು ಡಿಕ್ಕಿ ಹೊಡೆದಿತ್ತು.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಹಾಗೂ ಬಳಿಕ ಕುಂಬಳೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮಹಜರು ನಡೆಸಲಾಯಿತು.

ಮೃತರು ಮಕ್ಕಳಾದ ಮಾಲತಿ, ಕೃಷ್ಣ, ಕುಸುಮ, ಇಂದ್ರಾಣಿ ಹಾಗೂ ಮಲ್ಲಿಕಾ ಹಾಗೂ  ಅಳಿಯಂದಿರಾದ ರಾಜು, ನವೀನ್ ಹಾಗೂ ಪ್ರವೀಣ್, ಸಹೋದರರಾದ ಗೋಪಿ, ಬಾಬು ಪೂಜಾರಿ, ರಾಮ ಪೂಜಾರಿ, ಸಂಜೀವ ಪೂಜಾರಿ ಎಂಬಿವರನ್ನಗಲಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement