Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ವಿವಾಹದ ಭರವಸೆ ನೀಡಿ ಹಣ, ಚಿನ್ನ ವಂಚನೆ : ಆರೋಪಿ ಬಂಧನ

ಕಣ್ಣೂರು : ಕಾಸರಗೋಡು ಸೇರಿದಂತೆ ಕೇರಳದ ವಿವಿಧ ಜಿಲ್ಲೆಗಳಲ್ಲಿ ವಿವಾಹದ ಭರವಸೆ ನೀಡಿ ಮಹಿಳೆಯರನ್ನು ವಂಚಿಸಿ ಹಣ ಮತ್ತು ಚಿನ್ನಾಭರಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಣ್ಣೂರಿನ ಕೂತ್ತುಪರಂಬ ನಿವಾಸಿ ನಾದಿರ್‌ಶಾ ಅಬ್ದುಲ್ಲ (58) ಬಂಧಿತ ಆರೋಪಿ. ಎರ್ನಾಕುಳಂನಲ್ಲಿ ಅಡಗಿಕೊಂಡಿದ್ದ ಆತನನ್ನು ನೇಮಂ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ಕರಮನಾ ಪೊಲೀಸ್ ಠಾಣೆಗೆ ಲಭಿಸಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿತ್ತು.

ಕಣ್ಣೂರು, ಕಾಸರಗೋಡು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆರೋಪಿ ಇದೇ ರೀತಿಯಲ್ಲಿ ಹಣಕಾಸಿನ ವಂಚನೆ ನಡೆಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಆದರೆ, ಮಾನಹಾನಿಯ ಭೀತಿಯಿಂದ ಸಂತ್ರಸ್ತ ಮಹಿಳೆಯರು ದೂರು ನೀಡಲು ಹಿಂದೇಟು ಹಾಕಿದ್ದರಿಂದ ಈ ಹಿಂದೆ ಆತನ ವಿರುದ್ಧ ಪ್ರಕರಣಗಳು ದಾಖಲಾಗಿರಲಿಲ್ಲ ಎಂದು ತಿಳಿದುಬಂದಿದೆ.

ತಿರುವನಂತಪುರ ನಗರ ಪೊಲೀಸ್ ಆಯುಕ್ತ ಡಾ. ಅರುಳ್ ಬಿ. ಕೃಷ್ಣ, ಡಿಸಿಪಿ ದೀಪಕ್ ಧನ್ಕರ್ ಹಾಗೂ ಫೋರ್ಟ್ ಎಸಿಪಿ ಪ್ರದೀಪ್ ಕೆ. ಅವರ ನಿರ್ದೇಶನದಂತೆ ನೇಮಂ ವೃತ್ತ ನಿರೀಕ್ಷಕ ಶ್ರೀಲಾಲ್ ಚಂದ್ರಶೇಖರನ್, ಉಪನಿರೀಕ್ಷಕ ನಿಸ್ಸಾಮುದ್ದೀನ್ ಮತ್ತು ಹಿರಿಯ ಸಿವಿಲ್ ಪೊಲೀಸ್ ಅಧಿಕಾರಿಗಳಾದ ವಿನೀತ್, ಬಿನೂಪ್ ಹಾಗೂ ಬಿಜೇಶ್ ಅವರನ್ನೊಳಗೊಂಡ ತಂಡ ಆರೋಪಿಯನ್ನು ಬಂಧಿಸಿದೆ.

Post a Comment

0 Comments

ಜಾಹೀರಾತು

Responsive Advertisement