ಕಾಸರಗೋಡು : ಎಸ್‌ಐಆರ್ ತಪ್ಪಾಗಿದ್ದರೆ ಕಾಸರಗೋಡು ಶಾಸಕ ಕಲ್ಲಟ್ರ ಮಾಯಿನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಶಾಸಕ ಕಚೇರಿಗೆ ಮೆರವಣಿಗೆ ನಡೆಸಲಾಯಿತು.
ಕಾಸರಗೋಡು ಕರಂದಕ್ಕಾಡ್‌ನ ಬ್ಯಾಂಕ್ ರಸ್ತೆಯಲ್ಲಿರುವ ಬಿಜೆಪಿ ನಗರ ಸಮಿತಿ ಕಚೇರಿ ಪರಿಸರದಿಂದ ಆರಂಭವಾದ ಮೆರವಣಿಗೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಉದ್ಘಾಟಿಸಿದರು.
ಮಂಡಲ ಅಧ್ಯಕ್ಷ ಗುರುಪ್ರಸಾದ್ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮುಖಂಡರಾದ ಪಿ.ಆರ್. ಸುನಿಲ್, ಅನಿತಾ ಆರ್. ನಾಯಕ್, ಎ. ರವೀಂದ್ರ ಸೇರಿದಂತೆ ಹಲವು ನಾಯಕರು ಮೆರವಣಿಗೆಗೆ ನೇತೃತ್ವ ವಹಿಸಿದ್ದರು.


0 Comments