Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಬಿಜೆಪಿಯಿಂದ ಜಿಲ್ಲೆಯಲ್ಲಿ ವ್ಯಾಪಕ ಪ್ರಜಾಪ್ರಭುತ್ವ ರಕ್ಷಣೆ ಅಭಿಯಾನ : ವಿ.ಕೆ. ಸಜೀವನ್

ಕಾಸರಗೋಡು : ಚುನಾವಣೆ ಪ್ರಕ್ರಿಯೆ ಮತ್ತು ವ್ಯವಸ್ಥೆಗಳ ಕುರಿತು ಸುಳ್ಳು ಪ್ರಚಾರ ನಡೆಸಿ ಜನರನ್ನು ಪ್ರಚೋದಿಸಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಹಾಗೂ ಸಿಜೆಪಿ ಸೇರಿದಂತೆ ವಿವಿಧ ಸಂಘಟನೆಗಳು ನಡೆಸುತ್ತಿರುವ ಯತ್ನಗಳ ವಿರುದ್ಧ, ಬಿಜೆಪಿ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಪ್ರಜಾಪ್ರಭುತ್ವವಾದಿಗಳನ್ನು ಸಂಘಟಿಸಿ 'ಪ್ರಜಾಪ್ರಭುತ್ವ ರಕ್ಷಣೆ ಅಭಿಯಾನ' ಆಯೋಜಿಸಲಿದೆ ಎಂದು ಬಿಜೆಪಿ ರಾಜ್ಯ ಸೆಲ್ ಸಂಚಾಲಕ ಹಾಗೂ ಕಣ್ಣೂರು ವಲಯ ಪ್ರಭಾರಿ ವಿ.ಕೆ. ಸಜೀವನ್ ತಿಳಿಸಿದ್ದಾರೆ. ಡಾ. ಶ್ಯಾಮಪ್ರಸಾದ್ ಮುಖರ್ಜಿ ಮಂದಿರದಲ್ಲಿ ನಡೆದ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳು ಮತ್ತು ಮೇಲ್ಮಟ್ಟದ ಪದಾಧಿಕಾರಿಗಳ ಹಾಗೂ ಜಿಲ್ಲಾ ಸಮಿತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಚುನಾವಣಾ ಸೋಲುಗಳ ಹೊಣೆಯನ್ನು ಇವಿಎಂ ಮಿಷನ್‌ಗಳ ಮೇಲೆ ಹೊರಿಸುವ ಪ್ರಯತ್ನ ವಿಫಲವಾದ ನಂತರ, ಚುನಾವಣಾ ಆಯೋಗವನ್ನು ನಿಂದಿಸಲು ಕಾಂಗ್ರೆಸ್ ನೇತೃತ್ವದಲ್ಲಿ ಮೋದಿ ವಿರೋಧಿ ಪಕ್ಷಗಳು ರಂಗಕ್ಕಿಳಿದಿವೆ ಎಂದು ವಿ.ಕೆ. ಸಜೀವನ್ ಹೇಳಿದರು. ಎಲ್‌ಡಿಎಫ್ ಮತ್ತು ಯುಡಿಎಫ್ ಎರಡೂ ಬೇರೆ ಬೇರೆಯಲ್ಲ, ಒಂದೇ ಎಂಬ ಬಿಜೆಪಿಯ ಆರೋಪವನ್ನು ಸರಿಪಡಿಸುವಂತಹ ದೃಶ್ಯಗಳು ದೆಹಲಿಯ ಪ್ರತಿಭಟನೆಗಳಿಂದ ಹೊರಬಂದಿವೆ. ಜನಸಮೂಹವನ್ನು ಜೋಡಿಸಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಮತ್ತು ಜಗತ್ತಿನ ಮುಂದೆ ಭಾರತವನ್ನು ಕೀಳಾಗಿ ಬಿಂಬಿಸಲು ನಡೆಯುತ್ತಿರುವ ಯತ್ನಗಳನ್ನು ಪ್ರಜಾಪ್ರಭುತ್ವ ರಕ್ಷಣೆ ಅಭಿಯಾನದ ಮೂಲಕ ಜನರ ಮುಂದೆ ಬಯಲುಗೊಳಿಸಲಾಗುವುದು ಎಂದು ಅವರು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿದ್ದರು. ಕಣ್ಣೂರು ವಲಯ ಅಧ್ಯಕ್ಷ ಅಡ್ವ. ಕೆ. ಶ್ರೀಕಾಂತ್, ಕಣ್ಣೂರು ವಲಯ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ವಿ. ರವೀಂದ್ರನ್, ಎ. ವೇಲಾಯುಧನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್. ಸುನಿಲ್, ಎನ್. ಬಾಬುರಾಜ್, ಮನುಲಾಲ್ ಮೇಲತ್ ಮೊದಲಾದವರು ಮಾತನಾಡಿದರು.

Post a Comment

0 Comments

ಜಾಹೀರಾತು

Responsive Advertisement