Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಕಲೋತ್ಸವಕ್ಕೆ ಪರಿಸರಸ್ನೇಹಿ ಸ್ಪರ್ಶ: ಬಟ್ಟೆಯ ಚೀಲಗಳನ್ನು ಒದಗಿಸಿ ಮಾದರಿಯಾದ ಮುಳ್ಳೇರಿಯ ಎ.ಯು.ಪಿ. ಶಾಲೆಯ ಅಧ್ಯಾಪಿಕೆ

ಬದಿಯಡ್ಕ : ಶಾಲಾ ಕಲೋತ್ಸವಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಸಂರಕ್ಷಣೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮುಳ್ಳೇರಿಯ ಎ.ಯು.ಪಿ. ಶಾಲೆಯ ಹಿಂದಿ ಶಿಕ್ಷಕಿ ಎಂ. ಸಾವಿತ್ರಿ ಅವರ ನೇತೃತ್ವದಲ್ಲಿ ತಯಾರಿಸಿದ ಬಟ್ಟೆಯ ಚೀಲಗಳನ್ನು ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ಸಂಘಟಕರಿಗೆ ಹಸ್ತಾಂತರಿಸಲಾಯಿತು.

ಶಾಲಾ ಕಲೋತ್ಸವದ ಕಾರ್ಯಕ್ರಮ ಸಮಿತಿಯ ವಿವಿಧ ಚಟುವಟಿಕೆಗಳಿಗೆ ನೂರಾರು ಚೀಲಗಳ ಅಗತ್ಯವಿರುತ್ತದೆ. ಇದನ್ನು ಮನಗಂಡು  ಅಧ್ಯಾಪಿಕೆ  ಸಾವಿತ್ರಿ ಅವರು ಹಲವು ವರ್ಷಗಳಿಂದ ತಮ್ಮ ಶಾಲೆಯ ಸೀಡ್ ಕ್ಲಬ್‌ನ ಸದಸ್ಯರ ಸಹಕಾರದೊಂದಿಗೆ ಬಟ್ಟೆಯ ಚೀಲಗಳನ್ನು ತಯಾರಿಸಿ, ಕಲೋತ್ಸವ ಆರಂಭವಾಗುವ ಹಲವು ವಾರಗಳ ಮೊದಲೇ ಆಯೋಜಕರಿಗೆ ತಲುಪಿಸುತ್ತಿದ್ದಾರೆ. ಪರಿಸರ ಸಂರಕ್ಷಣಾ ಚಟುವಟಿಕೆಗಳಿಗಾಗಿ ಸಾವಿತ್ರಿ ಅವರು ಸರ್ಕಾರದ 'ವನಮಿತ್ರ ಪ್ರಶಸ್ತಿ' ಸೇರಿದಂತೆ ಹಲವು ಪುರಸ್ಕಾರಗಳನ್ನು ಪಡೆದಿದ್ದಾರೆ.

ಈ ಬಾರಿಯ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವವು ಅಕ್ಟೋಬರ್ 26, 27 ಹಾಗೂ ನವೆಂಬರ್ 2, 3 ಮತ್ತು 4ರಂದು ಬದಿಯಡ್ಕದ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದೆ. ಸೀಡ್ ಕ್ಲಬ್‌ನ ಶಿಕ್ಷಕಿ ಉಷಾಕುಮಾರಿ ಹಾಗೂ ವಿದ್ಯಾರ್ಥಿನಿಯರಾದ ಎಸ್. ಆರ್ಯ ಮತ್ತು ಬಿ. ಲಕ್ಷ್ಯ ಅವರೊಂದಿಗೆ ಆಗಮಿಸಿದ ಸಾವಿತ್ರಿ ಟೀಚರ್ ಬಟ್ಟೆಯ ಚೀಲಗಳನ್ನು ಹಸ್ತಾಂತರಿಸಿದರು.

ಉಪಜಿಲ್ಲಾ ಶಿಕ್ಷಣಾಧಿಕಾರಿ ಎಂ. ಅಶೋಕ್, ಶಾಲೆಯ ಪ್ರಾಂಶುಪಾಲ ಎಂ. ಶ್ರೀಕೃಷ್ಣ ಹಾಗೂ ಮುಖ್ಯ ಶಿಕ್ಷಕಿ ಟಿ.ಎಚ್. ಶಾಹಿದಾ ಬೀವಿ ಚೀಲಗಳನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಆನಂದ್ ಮವ್ವಾರ್, ಶಾಫಿ ಚೂರಿಪಳ್ಳಂ, ಶರೀಫ್ ಪಾಲಕ್ಕಾರ್, ಕೆ. ಪ್ರಭಾಕರ ನಾಯರ್, ಪಿ. ಸಿಂಧು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Post a Comment

0 Comments

ಜಾಹೀರಾತು

Responsive Advertisement