ಕಾಸರಗೋಡು : ಭೂರಹಿತರ ಹಲವು ವರ್ಷಗಳ ಕನಸುಗಳನ್ನು ಪಟ್ಟಾ ಮೇಳದ ಮೂಲಕ ಸರ್ಕಾರ ನನಸು ಮಾಡುತ್ತಿದೆ ಎಂದು ಸ್ಥಳೀಯಾಡಳಿತ ಸಚಿವ ಕೆ.ಎಂ. ಶಾಜಿ ಹೇಳಿದರು.
ಕಾಸರಗೋಡು ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆದ ಜಿಲ್ಲಾ ಮಟ್ಟದ ಪಟ್ಟಾ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಾಸಕ ಕಲ್ಲಟ್ರ ಮಾಯಿನ್ ಅಧ್ಯಕ್ಷತೆ ವಹಿಸಿದ್ದರು.
ಶಾಸಕರಾದ ಎ.ಕೆ.ಎಂ. ಅಶ್ರಫ್, ಕೆ. ನೀಲಕಂಠನ್, ಕಾಸರಗೋಡು ನಗರಸಭೆ ಅಧ್ಯಕ್ಷೆ ಶಾಹಿನಾ ಸಲೀಂ, ಬ್ಲಾಕ್ ಪಂಚಾಯತ್ ಅಧ್ಯಕ್ಷ ಅಬ್ದುಲ್ಲ ಕುಂಞಿ ಚೇರ್ಕಳ, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಪಿ.ಕೆ. ಫೈಸಲ್, ಎ. ಅಬ್ದುಲ್ ರಹ್ಮಾನ್, ಸಿ.ಪಿ. ಬಾಬು ಹಾಗೂ ರಾಘವ ಚೇರಾಲ್ ಮೊದಲಾದವರು ಮಾತನಾಡಿದರು. ಜಿಲ್ಲಾಧಿಕಾರಿ ಶ್ರೀಧನ್ಯ ಸುರೇಶ್ ಸ್ವಾಗತಿಸಿ ಎ.ಡಿ.ಎಂ. ಪಿ. ಉದಯಕುಮಾರ್ ವಂದಿಸಿದರು.

0 Comments