Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಉದ್ಯೋಗಕ್ಕಾಗಿ ಇಸ್ರೇಲ್ ಗೆ ತೆರಳಿದ ವ್ಯಕ್ತಿ ನಿಗೂಢ ನಾಪತ್ತೆ

 

ಮಂಗಳೂರು: ಔದ್ಯೋಗಿಕ ಕನಸಿನೊಂದಿಗೆ  ಇಸ್ರೇಲ್‌ಗೆ ತೆರಳಿದ್ದ ಮಂಗಳೂರು ಮೂಲದ ವ್ಯಕ್ತಿಯೊಬ್ಬರು ಕಳೆದ ಹತ್ತು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಮಂಗಳೂರಿನ ಪಡೀಲ್ ಸಮೀಪದ  ಕೊಡೆಕ್ಕಲ್ ನಿವಾಸಿ ಶಡ್ರಕ್ ಇಮ್ಯಾನುವಲ್ (41) ನಾಪತ್ತೆಯಾದವರು.

 ನೇಮಕಾತಿ ಸಂಸ್ಥೆಯೊಂದರ ಮೂಲಕ 2025ರ ಮೇ ತಿಂಗಳಿನಲ್ಲಿ ಇಸ್ರೇಲ್‌ಗೆ ತೆರಳಿದ್ದ ಶಡ್ರಕ್, ನಜರೆತ್ ಸಮೀಪದ 'ಯುಸಿಟಿ ಲಿಕ್ವಿಡ್ ಸೊಲ್ಯೂಷನ್ಸ್' ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಕ್ಟೋಬ‌ರ್ 16ರಂದು ಶುಕ್ರವಾರ ರಾತ್ರಿ ಕುಟುಂಬಸ್ಥರೊಂದಿಗೆ ವಾಟ್ಸ್ಆ್ಯಪ್ ವಿಡಿಯೋ ಕರೆ ಮೂಲಕ ಮಾತನಾಡಿದ್ದೇ ಕೊನೆ, ತದನಂತರ ಅವರ ಮೊಬೈಲ್ ಸಂಪರ್ಕ ಕಡಿದುಹೋಗಿದೆ. ಅಲ್ಲದೆ, ಅವರು ಕೆಲಸ ಮಾಡುತ್ತಿದ್ದ ಕಂಪನಿಯ ಸ್ಥಳದಲ್ಲೂ ಕಾಣಿಸದಿರುವುದು ಆತಂಕ ಹೆಚ್ಚಿಸಿದೆ.

 ಪತಿಯ ಯಾವುದೇ ಸುಳಿವು ಸಿಗದೆ ಕಂಗಾಲಾಗಿರುವ ಪತ್ನಿ ಡೇಸಿ ಇಮ್ಯಾನುವಲ್, ಮಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ಹಾಗೂ ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಇಸ್ರೇಲ್ ಸ್ಥಳೀಯ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ಶೋಧ ಕಾರ್ಯ ನಡೆಸಿ, ಪತಿಯನ್ನು ಸುರಕ್ಷಿತವಾಗಿ ಪತ್ತೆಹಚ್ಚಿಕೊಡುವಂತೆ ಅವರು ಮನವಿ ಮಾಡಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement