Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಹಿರಿಯ ಕಾಂಗ್ರೆಸ್‌ ನಾಯಕ ಎ.ವಿ. ಮ್ಯಾಥ್ಯೂ ನಿಧನ

ಕಾಸರಗೋಡು: ಜಿಲ್ಲೆಯ ಕಾಂಗ್ರೆಸ್‌ನ ಹಿರಿಯ ನಾಯಕ, ಬಾಳಾಲ್ ನಿವಾಸಿ ಎ.ವಿ. ಮ್ಯಾಥ್ಯೂ (86) ನಿಧನರಾದರು. ಇವರ ಅಂತ್ಯಕ್ರಿಯೆ ಬುಧವಾರ ಸಂಜೆ 4 ಗಂಟೆಗೆ ಬಾಳಾಲ್‌ನ ಸಂತ ಅಂತೋನಿ ಚರ್ಚ್‌ನ ಸ್ಮಶಾನದಲ್ಲಿ ನಡೆಯಲಿದೆ.

ಮಲೆನಾಡು ಪ್ರದೇಶದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಬೆಳೆಸುವಲ್ಲಿ ಹಾಗೂ ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಹಕಾರ ಕ್ಷೇತ್ರಗಳಲ್ಲಿ ಹಲವು ಕಾರ್ಯಗಳಿಗೆ ನಾಯಕತ್ವ ನೀಡುವಲ್ಲಿ ಎ.ವಿ. ಮ್ಯಾಥ್ಯೂ ಮಹತ್ವದ ಪಾತ್ರ ವಹಿಸಿದ್ದರು. ಇವರು ‘ಕುಂಜೇಟ್ಟನ್’ ಎಂದೇ ಪರಿಚಿತರಾಗಿದ್ದರು.

ಮಾಜಿ ಮುಖ್ಯಮಂತ್ರಿಗಳಾದ ಎ.ಕೆ. ಆಂಟನಿ, ಉಮ್ಮನ್ ಚಾಂಡಿ, ಮಾಜಿ ಕೇಂದ್ರ ಸಚಿವ ವೈಲಾರ್ ರವಿ ಸೇರಿದಂತೆ ಕಾಂಗ್ರೆಸ್‌ನ ಹಿರಿಯ ನಾಯಕರಾದ ಕೆ.ಪಿ. ನೂರ್ದೀನ್ ಮತ್ತು ಕೆ.ಸಿ. ಜೋಸೆಫ್ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದರು.

ಬಾಳಾಲ್ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ, ಮಾಲೋತ್ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ, ಹೈನುಗಾರಿಕೆ ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ, ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ) ಸದಸ್ಯರಾಗಿ, ಕಿಸಾನ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾಗಿ, ಬಾಳಾಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಹಾಗೂ ಬಾಳಾಲ್ ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಇವರ ಪತ್ನಿ ಅಚ್ಚಾಮ್ಮ ಈ ಹಿಂದೆಯೇ ನಿಧನರಾಗಿದ್ದಾರೆ. ಮಕ್ಕಳಾದ ಬಿಜಿ ಟೋಮಿ, ಬಿಂದು ಮ್ಯಾಥ್ಯೂ, ಸಿಂಧು ನೋಬಿ, ಸಿಜಿ ಬಿನು ಮತ್ತು ಜರ್ಮನಿಯಲ್ಲಿರುವ ಅಜಿ ಮ್ಯಾಥ್ಯೂ ಎಂಬಿವರನ್ನಗಲಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement