ಬದಿಯಡ್ಕ : ತುಳುವೆರೆ ಆಯನೋ ಕೂಟವು 20ನೇ ವರ್ಷದ ಸಂಭ್ರಮದ ಹೊಸ್ತಿಲಲ್ಲಿದ್ದು ಇದರ ಅಂಗವಾಗಿ ಅಭೂತಪೂರ್ವ ಕಾರ್ಯಕ್ರಮವೊಂದನ್ನು ಆಯೋಜಿಸಲು ಸಿದ್ಧತೆ ಆರಂಭಗೊಂಡಿದೆ.
ಈ ಬಗ್ಗೆ ಬದಿಯಡ್ಕದ ಸಂಸ್ಕೃತಿ ಭವನದಲ್ಲಿ ನಡೆದ ತುಳುವೆರೆ ಆಯನೋ ಕೂಟದ ವಿಸ್ತೃತ ಸಭೆಯಲ್ಲಿ ಜನವರಿ 30 ಹಾಗೂ 31ರಂದು ವೈವಿಧ್ಯಮಯವಾದ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ. ಇದರ ಪೂರ್ವ ಸಿದ್ಧತೆಗಾಗಿ ವಿಪುಲವಾದ ಸ್ವಾಗತ ಸಭೆಯನ್ನು ನವೆಂಬರ್ 8ಕ್ಕೆ ಬದಿಯಡ್ಕದಲ್ಲಿ ನಡೆಸಲಾಗುತ್ತಿದ್ದು ಜಿಲ್ಲೆಯ ಪ್ರತಿ ಪಂಚಾಯತ್ ಮಟ್ಟದ ತುಳುವರನ್ನೊಳಗೊಂಡ ಬೃಹತ್ ಸ್ವಾಗತ ಸಮಿತಿ ರೂಫಿಕರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಬಗ್ಗೆ ನಡೆದ ಸಭೆಯಲ್ಲಿ ತುಳುವೆರೆ ಆಯನೋ ಕೂಟದ ಅಧ್ಯಕ್ಷ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಅಧ್ಯಕ್ಷತೆವಹಿಸಿದ್ದರು.
ತುಳುವೆರೆ ಆಯನೋ ಕೂಟದ ಸ್ಥಾಪಕ ಕಾರ್ಯದರ್ಶಿ ಡಾ.ರಾಜೇಶ್ ಆಳ್ವ ಕೂಟ ನಡೆದು ಬಂದ ಹಾದಿ ಹಾಗೂ ವಿವಿಧ ಕಾರ್ಯ ವೈಖರಿಗಳ ಬಗ್ಗೆ ಮಾತನಾಡಿದರು.
ಜಿ.ಪಂ.ಸದಸ್ಯ ರಾಮಪ್ಪ ಮಂಜೇಶ್ವರ, ಬದಿಯಡ್ಕ ಪಂ.ಸದಸ್ಯ ಶ್ಯಾಮ್ ಪ್ರಸಾದ್ ಮಾನ್ಯ, ಮಾಹಿನ್ ಕೇಳೋಟ್, ಗಂಗಾಧರ ಗೋಳಿಯಡ್ಕ, ಶ್ಯಾಮ್ ಪ್ರಸಾದ್ ಸರಳಿ, ಪುತ್ತಿಗೆ ಪಂ.ಮಾಜಿ ಅಧ್ಯಕ್ಷ ನ್ಯಾಯವಾದಿ ಥೋಮಸ್ ಡಿಸೋಜ, ಕುಂಬ್ಡಾಜೆ ಪಂ.ಮಾಜಿ ಅಧ್ಯಕ್ಷ ಆನಂದ ಮವ್ವಾರು, ಸಾಮಾಜಿಕ ಕಾರ್ಯಕರ್ತ ಮಹಾಲಿಂಗ ಕೆ.ಕುಮಾರ ಮಂಗಲ, ಸಂತೋಷ್ ರೈ ಗಾಡಿಗುಡ್ಡೆ, ಸುಂದರ ಕಟ್ನಡ್ಕ, ಶ್ರೀನಿವಾಸ ಆಳ್ವ ಕಳತ್ತೂರು, ರವೀಂದ್ರ ರೈ ಮಲ್ಲಾವರ, ಹರ್ಷ ರೈ ಪುತ್ರಕಳ, ಸುಧೀರ್ ಕುಮಾರ್ ರೈ ಮುಳ್ಳೇರಿಯ, ರಾಮ ಪಟ್ಟಾಜೆ, ರವಿ ನಾರಂಪಾಡಿ, ಶ್ಯಾಮ ಆಳ್ವ ಕಡಾರು, ಜಯರಾಮ ಪಾಟಾಳಿ ಪಡುಮಲೆ, ರವಿ ನಾಯ್ಕಾಪು, ಅಖಿಲೇಷ್ ನಗುಮುಗಂ ಮೊದಲಾದವರು ಮಾತನಾಡಿದರು.
ಜೈ ತುಳುನಾಡು ಸಂಘಟನೆಯ ಜಗನ್ನಾಥ ಕುಲಾಲ್, ಉಪ್ಲೇರಿ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಸೇವಾ ಸಮಿತಿ ಕಾರ್ಯದರ್ಶಿ ರಮೇಶ್ ಕುಲಾಲ್, ಡಾ.ಶ್ರೀನಿಧಿ ಸರಳಾಯ ಸುಂದರ ಬಾರಡ್ಕ,ಲಕ್ಷ್ಮಣ ಬದಿಯಡ್ಕ, ಉದಯ ಬಾಂಜತ್ತಡ್ಕ ಮೊದಲಾದವರು ಉಪಸ್ಥಿತರಿದ್ದರು.
ಕರ್ನಾಟಕದ ದ್ವಿತೀಯ ಭಾಷೆಯನ್ನಾಗಿ ಅಧಿಕೃತಗೊಳಿಸಿದ ಸರಕಾರಕ್ಕೆ ಹಾಗೂ ಈ ಬಗ್ಗೆ ಪ್ರಯತ್ನಿಸಿದವರಿಗೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು. ತುಳುವೆರೆ ಆಯನೋ ಕೂಟದಲ್ಲಿದ್ದು ಸ್ವರ್ಗೀಯರಾದ ರವಿಕಾಂತ ಕೇಸರಿ ಕಡಾರು, ಪದ್ಮನಾಭ ಶೆಟ್ಟಿ ವಳಮಲೆ, ಜಗನ್ನಾಥ ಆಳ್ವ ಮೂಕಂಪಾರೆ ಅವರನ್ನು ಸಂಸ್ಮರಣೆ ಮಾಡಲಾಯಿತು. 20 ವರ್ಷದ ಸಂಭ್ರಮಾಚರಣೆಯ ಕಾರ್ಯಕ್ರಮದ ಪೂರ್ವ ಸಿದ್ಧತೆಗಾಗಿ ಗುರು ಪ್ರಸಾದ್ ರೈ ಅವರನ್ನು ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು. ಕಾರ್ಯಕ್ರಮದ ಯಶಸ್ವಿಗಾಗಿ ತುಳುಪರ ಸಂಘ ಸಂಸ್ಥೆಗಳ ಹಾಗೂ ಗಣ್ಯರ ಸಹಯೋಗ ಪಡೆಯಲು ನಿರ್ಧರಿಸಲಾಯಿತು. ತುಳುವೆರೆ ಆಯನೋ ಕೂಟದ ಕಾರ್ಯದರ್ಶಿ ಜಯ ಮಣಿಯಂಪಾರೆ ಸ್ವಾಗತಿಸಿ, ಭಾಸ್ಕರ ಕೆ.ವಂದಿಸಿದರು.

0 Comments