Ticker

6/recent/ticker-posts

Ad Code

ಮುಂಬೈ ಭಯೋತ್ಪಾದಕ ದಾಳಿ ಸೂತ್ರದಾರನ ಕೊಚ್ಚಿನ್ ಬೇಟಿ, ಮುಂಬೈ ಕ್ರೈಂಬ್ರಾಂಚ್ ಶೀಘ್ರ ಕೇರಳಕ್ಕೆ


 ನವದೆಹಲಿ: ಮುಂಬೈ ಭಯೋತ್ಪಾದಕ ದಾಳಿಯ ಮುಖ್ಯ ಸೂತ್ರದಾರ ತಹಾವೂರ್ ಹುಸೈನ್ ರಾಣಾ  ಕೊಚ್ಚಿನ್ ನಗರಕ್ಕೆ ಬೇಟಿಯಾದ ಬಗ್ಗೆ ನಿಖರ ಮಾಹಿತಿ ಬಹಿರಂಗಗೊಂಡಿದೆ. ಮುಂಬೈ ಭಯೋತ್ಪಾದಕ ದಾಳಿಯ ಮೊದಲು  ತಹಾವೂರ್ ರಾಣಾ ದೆಹಲಿ, ಮುಂಬೈ, ಕೊಚ್ಚಿನ್ ಎಂಬೆಡೆಗಳಿಗೆ ಬೇಟಿ ನೀಡಿದ್ದನು. ಈತನ ಕೆಲವು ಗೆಳೆಯರು ಕೊಚ್ಚಿನ್ ನಲ್ಲಿದ್ದು ಅವರನ್ನು ಕಾಣಲು ಕೇರಳಕ್ಕೆ ಬಂದನೆಂದು ಆತ ಎನ್.ಐ.ಎ. ಅಧಿಕಾರಿಗಳಿಗೆ ಹೇಳಿಕೆ ನೀಡಿದ್ದಾನೆ. ತಹಾವೂರ್ ರಾಣಾ ಕೊಚ್ಚಿನ್ ಗೆ ಬಂದು ಮಾತುಕತೆ ನಡೆಸಿದವರ ಪೂರ್ಣ ಮಾಹಿತಿ ಎನ್.ಐ.ಎ ಹಾಗೂ ಮುಂಬೈ ಕ್ರೈಂಬ್ರಾಂಚ್ ಅಧಿಕಾರಿಗಳಿಗೆ ಲಭಿಸಿದೆ. ಈ ಹಿನ್ನೆಲೆಯಲ್ಲಿ ಮುಂಬೈ ಕ್ರೈಂಬ್ರಾಂಚ್ ಅಧಿಕಾರಿಗಳು  ಶೀಘ್ರವೇ ಕೇರಳಕ್ಕೆ ಆಗಮಿಸುವರು ಎಂದು ವಾರ್ತಾ ಸಂಸ್ಥೆ ವರದಿ ಮಾಡಿದೆ.  ತಹಾವೂರ್ ರಾಣಾ ನನ್ನು ಇದೀಗ ನ್ಯಾಯಾಲಯವು ಎನ್.ಐ.ಎ.ವಶಕ್ಕೆ ನೀಡಿದ್ದು ಆತನ ವಿಚಾರಣೆ ಮುಂದುವರಿಯುತ್ತಿದೆ

Post a Comment

0 Comments