ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಂನಲ್ಲಿ 26 ಮಂದಿಯನ್ನು ಗುಂಡಿಟ್ಟು ಕೊಂದ ಪಾಕ್ ಭಯೋತ್ಪಾದಕ ಕೇಂದ್ರಗಳಿಗೆ ಭಾರತದ ಸೇನೆ ನಡೆಸಿದ ದಾಳಿಯಲ್ಲಿ ಸತ್ತ ಭಯೋತ್ಪಾದಕರ ಸಂಖೈ 300 ದಾಟಿದೆಯೆಂದು ತಿಳಿದು ಬಂದಿದೆ. 70 ಜನರು ಸತ್ತು 150 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ಸ್ವತಃ ಪಾಕಿಸ್ಥಾನವೇ ಒಪ್ಪಿಕೊಂಡಿದೆ. ಆದರೆ ಸತ್ತ ಭಯೋತ್ಪಾಕರ ಸಂಖೈ 300 ಆಗಿದೆ. ಇದು 500 ದಾಟುವ ಸಾಧ್ಯತೆ ಇದೆಯೆಂದು ಪಾಕಿಸ್ತಾನದ ಹಲವು ಸಾಮಾಜಿಕ ಜಾಲತಾಣಗಳು ವರದಿ ಮಾಡಿದೆ. 1 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಅವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದೂ ವರದಿ ಮಾಡಿವೆ. ಆಪರೇಶನ್ ಸಿಂಧೂರ್ ಎಂಬ ಹೆಸರಿನಲ್ಲಿ
ತಡರಾತ್ರಿ ಭಾರತದ ಸೇನೆಯು ಲಷ್ಕರೆ ತೊಯ್ಬಾ, ಜೈಷೇ ಮುಹಮ್ಮದ್ ಸಹಿತ 9 ಭಯೋತ್ಪಾದಕ ಕೇಂದ್ರಗಳಿಗೆ ದಾಳಿ ನಡೆಸಿತ್ತು. ದಾಳಿಯನ್ನು ಅಮೆರಿಕಾ ಇಸ್ರಾಯೇಲ್, ರಷ್ಯಾ ಸಹಿತ ವಿವಿದ ರಾಷ್ಟ್ರಗಳು ಸ್ವಾಗತಿಸಿದ್ದು ಚೀನಾ ಖಂಡಿಸಿದೆ.
0 Comments