ಕಾಸರಗೋಡು: ಕಾರು ಚಲಾಯಿಸುತ್ತಿದ್ದಂತೆಯೇ ಎದೆ ನೋವು ಕಾಣಿಸಿಕೊಂಡ ಕಾರಡ್ಕ ನಿವಾಸಿ ಮೃತಪಟ್ಟ ಘಟನೆ ನಡೆದಿದೆ. ವಿದ್ಯಾನಗರ ಪೆಟ್ರೋಲ್ ಪಂಪಿನಲ್ಲಿ ಸರ್ವೀಸ್ ಸೆಂಟರ್ ಹೊಂದಿರುವ ಕಾರಡ್ಕ ಕೋಳಿಯಡ್ಕ ನಿವಾಸಿ ದಿವಂಗತ ಕುಞರಾಮ ಮಣಿಯಾಣಿಯವರ ಪುತ್ರ ಬಿ.ಉದಯ ಮಣಿಯಾಣಿ(54) ಮೃತಪಟ್ಟವರು. ಇಂಟರ್ ವ್ಯೂ ಒಂದಕ್ಕೆ ಹೋಗಿದ್ದ ಮಗಳನ್ನು ಕರೆ ತರಲು ಅವರು ನಿನ್ನೆ (ಶುಕ್ರವಾರ) ರಾತ್ರಿ 9.30 ಕ್ಕೆ ಕಾಸರಗೋಡು ರೈಲು ನಿಲ್ದಾಣಕ್ಕೆ ಹೋಗಿದ್ದರು. ಪತ್ನಿ ಶಾಂತ, ಪುತ್ರಿ ತನು ಶ್ರೀ ಜತೆ ಅವರು ಕಾರು ಚಲಾಯಿಸುತ್ತಾ ಮನೆಗೆ ಬರುವಾಗ ಎದೆ ನೋವು ಕಾಣಿಸಿಕೊಂಡಿತು. ಕೂಡಲೇ ಕಾಸರಗೋಡು ನಗರದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರೂ ಪ್ರಾಣ ಉಳಿಸಲಾಗಲಿಲ್ಲ. ಮೃತರು ಪತ್ನಿ ಶಾಂತ, ಪುತ್ರ ವಿನೋದ್, ಪುತ್ರಿ ತನು ಶ್ರೀ, ತಾಯಿ ಕುಞಮ್ಮ, ಸಹೋದರ ಸಹೋದರಿಯರಾದ ರಾಮಚಂದ್ರ, ಗೋಪಾಲ, ಕುಸುಮ, ಕೃಷ್ಣ, ಗೋವಿಂದ ಎಂಬಿವರನ್ನು ಅಗಲಿದ್ದಾರೆ

0 Comments