Ticker

6/recent/ticker-posts

ಎಣ್ಮಕಜೆ ಪಂಚಾಯತ್ ನ ಸ್ವಾತಂತ್ರ್ಯ ಸಂಗಮದಲ್ಲಿ ಡಾ.ಕೇಶವ ನಾಯ್ಕ್ , ಸತ್ಯನಾರಾಯಣ ಪುಣಿಂಚಿತ್ತಾಯ ಸಹಿತ ಹಲವು ಸಾಧಕ ಪ್ರತಿಭೆಗಳಿಗೆ ಸನ್ಮಾನ

 


ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತ್ ವತಿಯಿಂದ ಇಂದು ನಡೆಯುವ ಸ್ವಾತಂತ್ರ್ಯ ದಿನ ಸಂಗಮ ಎಂಬ ವೈವಿಧ್ಯಮಯ ಕಾರ್ಯಕ್ರಮದಲ್ಲಿ  ನಿವೃತ್ತ ಜನಾನುರಾಗಿ ವೈದಾಧಿಕಾರಿ ಡಾ.ಕೇಶವ ನಾಯ್ಕ್ ಖಂಡಿಗೆ, ತೆಂಕು - ಬಡಗು ಯಕ್ಷಗಾನ‌ ಭಾಗವತ ಸತ್ಯನಾರಾಯಣ ಪುಣಿಂಚಿತ್ತಾಯ, ನಿವೃತ್ತ ಭಾರತೀಯ ವಾಯು ಪಡೆ ಅಧಿಕಾರಿ ಸಂಶುದ್ದೀನ್, ಸಾಮಾಜಿಕ ಮುಂದಾಳು ಜೋಸ್  ಚೆಂಬೊಟ್ಟಿಕಲ್, ಸ್ವಚ್ಛತಾ ಕಾರ್ಯಕರ್ತ ಸುಂದರ ಕೆ.ತೋರಣಮೂಲೆ, ಮಾಪ್ಪಿಳಪ್ಪಾಟ್ ಗಾಯಕ ಜಬ್ಬಾರ್ ಉಕ್ಕಿನಡ್ಕ ಅವರನ್ನು ಪಂಚಾಯತ್ ಮಟ್ಟದಲ್ಲಿ ಗರಿಷ್ಠ ಸಾಧನೆ ತೋರಿದ ಸಾಧಕರಾಗಿ ಗುರುತಿಸಿ ಗೌರವಿಸಲಾಗುತ್ತದೆ ಮಧ್ಯಾಹ್ನ 1.30ಗಂಟೆಗೆ ಪಂಚಾಯತ್ ಕಚೇರಿ ಪರಿಸರದಿಂದ ಪೆರ್ಲ ಪೇಟೆಯಲ್ಲಾಗಿ ಬೃಹತ್ ವರ್ಣರಂಜಿತ ಮೆರವಣಿಗೆ, ಬಳಿಕ 2.00 ಗಂಟೆಗೆ ಪೆರ್ಲದ ಭಾರತೀ ಸದನದಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಶಾಸಕ ಎಕೆಎಂ ಆಶ್ರಫ್ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಸಂಶೋಧನ ಡಾಕ್ಟರೇಟ್ ಪದವಿ ಪಡೆದ ಮಹಮ್ಮದಾಲಿ ಬಲ್ತಕಲ್ಲು, ಕು.ಶಿಲ್ಪಾ ಎಂ.ಪಿ.ಬೈರಡ್ಕ, 

ಹೈಯರ್ ಸೆಕೆಂಡರಿ  ಕಾಮರ್ಸ್ ವಿಭಾಗದಲ್ಲಿ ಪೂರ್ಣ ಅಂಕ ಗಳಿಸಿದ ಶ್ರೀರಂಜಿನಿ, ಅರ್ಥಶಾಸ್ತ್ರ ಸ್ನಾತಕೋತ್ತರ ಪರೀಕ್ಷೆಯಲ್ಲಿ ಪ್ರಥಮ ರಾಂಕ್ ಗಳಿಸಿದ ಸ್ವಾತಿ ಬಿ.ಕೆ, ಬಿಎಸ್ಸಿ ಪದವಿ ಪರೀಕ್ಷೆಯಲ್ಲಿ ಪ್ರಥಮ ರಾಂಕ್ ಪಡೆದ ಜಿವಿತಾ ಎಸ್.ಕೆ ಸ್ವರ್ಗ ಅವರನ್ನು ಗೌರವಿಸಲಾಗುತ್ತದೆ.

ಎಣ್ಮಕಜೆ ಪಂಚಾಯತ್ ನಲ್ಲಿ ಎಸ್ಸಸ್ಸೆಲ್ಸಿ ಪರೀಕ್ಷೆಯಲ್ಲಿ ಎಪ್ಲಸ್ ಅಂಕ ಗಳಿಸಿದ 21,ಪ್ಲಸ್‌ ಟು ವಿನಲ್ಲಿ ಎಪ್ಲಸ್ ಗಳಿಸಿದ 10,ಕರ್ನಾಟಕ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ 7 ಮಂದಿ ವಿದ್ಯಾರ್ಥಿಗಳನ್ನು , ಪಂಚಾಯತ್ ಮಟ್ಟದಲ್ಲಿ ಗರಿಷ್ಠ ಸಾಧನೆ ತೋರಿದ ಸೇವಾ ಸಂಸ್ಥೆ,ಶಿಕ್ಷಣ ಸಂಸ್ಥೆಗಳನ್ನು  ಅಭಿನಂದಿಸಲಾಗುತ್ತಿದೆ.

Post a Comment

0 Comments