Ticker

6/recent/ticker-posts

ಕಣಜದ ಹುಳ ದಾಳಿಯಿಂದಾಗಿ ಸೌದೆ ಕಡಿಯುವ ಕಾರ್ಮಿಕ ಮೃತ್ಯು


 ಕಣಜದ ಹುಳ ದಾಳಿಯಿಂದಾಗಿ ಮರ ಕೆಲಸದ ಕಾರ್ಮಿಕ ಮೃತಪಟ್ಟ ಘಟನೆ ನಡೆದಿದೆ. ತಿರುವನಂತಪುರಂ ಬಾಪರಾಮಪುರಂ ನಿವಾಸಿ ರತೀಶ್(37) ಮೃತಪಟ್ಟ ಯುವಕ. ಈತನ ನೆರೆಮನೆಯ  ಬಳಿಯ ಮರದಲ್ಲಿ ಕಣಜದ ಹುಳ ಗೂಡು ಕಟ್ಟಿದ್ದು ಇದು ಸ್ಥಳೀಯರಿಗೆ ಅಪಾಯ ಸೃಷ್ಟಿಸಿತ್ತು. ಈ ಕಣಜದ ಹುಳ ಗೂಡನ್ನು ನಾಶಪಡಿಸಲು ರತೀಶ್ ಆಗಮಿಸಿದ್ದನು. ಸಮೀಪದ ಮನೆಯವರನ್ನು ಬಾಗಿಲು ಹಾಕಿ ಒಳಗೆ ಇರಲು ಹೇಳಿ ಕಣಜದ ಗೂಡಿಗೆ ಪೆಟ್ರೋಲ್ ಸುರಿಯುತ್ತಿದ್ದಂತೆಯೇ ಅವು ಒಂದಾಗಿ ದಾಳಿ ನಡೆಸಿತ್ತು. ಗಂಭೀರ ಗಾಯಗೊಂಡ ರತೀಶ್ ನನ್ನು ಆಸ್ಪತ್ರೆಗೆ ಸಾಗಿಸಿದರೂ ಮೃತಪಟ್ಟನೆನ್ನಲಾಗಿದೆ

Post a Comment

0 Comments