ಮುಂಡಿತ್ತಡ್ಕ : ಇತಿಹಾಸ ಪ್ರಸಿದ್ದ ಅರಿಯಪ್ಪಾಡಿ ಮಾಡ ಶ್ರೀ ಈರ್ವರು ಉಳ್ಳಾಕ್ಲು ಹಾಗೂ ಪರಿವಾರ ದೈವಸ್ಥಾನ ಅರಿಯಪ್ಪಾಡಿ ಮಾಡದಲ್ಲಿ ವರ್ಷಂಪ್ರತಿ ನಡೆಯುವ ಶ್ರೀ ದೈವಗಳ ಪ್ರತಿಷ್ಠಾ ದಿನ ಕಾರ್ಯಕ್ರಮ ಹಾಗೂ ಶ್ರೀದೈವಗಳ ನೇಮೋತ್ಸವ ಜನವರಿ 21ರಿಂದ 23 ರವರೆಗೆ ನಡೆಯಲಿದೆ. ಇದರ ಪ್ರಯುಕ್ತ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಅರಿಯಪ್ಪಾಡಿ ಮಾಡದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಉಳ್ಳಾಕ್ಲು ಆಡಳಿತ ಸಮಿತಿ, ಪದಾಧಿಕಾರಿಗಳು, ಉಳ್ಳಾಕ್ಲು ಗೆಳೆಯರ ಬಳಗ, ಉಳ್ಳಾಕ್ಲು ಮಹಿಳಾ ಸಂಘ ಮತ್ತು ಭಕ್ತಬಾಂಧವರು ಉಪಸ್ಥಿತರಿದ್ದರು.
.jpeg)
0 Comments