ಕಾಸರಗೋಡು : ಮಧೂರು ಗ್ರಾಮ ಪಂಚಾಯತಿನ ಬಿಜೆಪಿ 17ನೇ ವಾರ್ಡ್ ಸಮಿತಿಯಿಂದ ಐನೂರು ಮನೆಗಳಿಗೆ ಅಕ್ಕಿ ವಿತರಿಸುವ ಮೂಲಕ ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ನೂರನೇ ಜನ್ಮ ದಿನಾಚರಣೆಯನ್ನು ವೈಶಿಷ್ಟ್ಯಮಯವಾಗಿ ಆಚರಿಸಲಾಯಿತು. ಕಾಳ್ಯಂಗಾಡು ಜಗದಾಂಬ ಕ್ಷೇತ್ರ ಪರಿಸರದಲ್ಲಿ ನಡೆದ ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾಧ್ಯಕ್ಷೆ ಆಶ್ವಿನಿ ಎಂ.ಎಲ್.ಉದ್ಘಾಟಿಸಿದರು. ವಾರ್ಡ್ ಸದಸ್ಯ ಭಾನುಪ್ರಕಾಶ್ ಕೂಡು, ಬಿಜೆಪಿ ಜಿಲ್ಲಾ ಮೀಡಿಯ ಸೆಲ್ ಕೋರ್ಡಿನೇಟರ್ ಸುಕುಮಾರ ಕುದ್ರೆಪ್ಪಾಡಿ ಮೊದಲಾದವರು ಭಾಗವಹಿಸಿದ್ದರು.

0 Comments