ಪೆರ್ಮುದೆ : ಚೇವಾರು, ಪಟ್ಲ ಶ್ರೀ ಅಯ್ಯಪ್ಪ ಭಜನಾ ಮಂದಿರದ 26ನೇ ವಾರ್ಷಿಕೋತ್ಸವ ಮತ್ತು ಶ್ರೀ ಅಯ್ಯಪ್ಪ ದೀಪೋತ್ಸವ ಡಿ.25ರಂದು ಬ್ರಹ್ಮಶ್ರೀ ಉರ್ಮಿ ಶ್ರೀ ರಾಮಪ್ರಸಾದ್ ನಲ್ಲೂರಾಯರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಇದರಂಗವಾಗಿ ಅಂದು ಬೆಳಿಗ್ಗೆ 6 ಗಂಟೆಗೆ ತಂತ್ರಿಗಳ ಆಗಮನ, ಬೆಳಿಗ್ಗೆ ಗಂಟೆ 6.20ಕ್ಕೆ ದೀಪ ಪ್ರತಿಷ್ಠೆ, 6.30ಕ್ಕೆ ಗಣಪತಿ ಹವನ, 7 ಗಂಟೆಗೆ ಹರಿನಾಮ ಸಂಕೀರ್ತನೆ (ಉಪ್ಪಳ ಶ್ರೀ ಅಯ್ಯಪ್ಪ ಭಜನಾ ಮಂದಿರದ ಗುರುಸ್ವಾಮಿ ಮತ್ತು ಬಳಗದವರಿಂದ) ಗಂಟೆ 9 ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಬೆಳಿಗ್ಗೆ 10.30ರಿಂದ ಸಭಾ ಕಾರ್ಯಕ್ರಮ ಆಶೀರ್ವಚನ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್, ಶ್ರೀ ದತ್ತಾಂಜನೇಯ ಕ್ಷೇತ್ರ ದಕ್ಷಿಣ ಗಾಣಾಗಾಪುರ, ಬಿ. ವಸಂತ ಪೈ, ಶಂಕರ ರೈ ಮಂಟಪಾಡಿ, ಪೈವಳಿಕೆ ಗ್ರಾಮ ಪಂಚಾಯತು ಸದಸ್ಯೆ ರಾಜೀವಿ ಶೆಟ್ಟಿಗಾರ್ ಕಯ್ಯಾರು , ಯಜಮಾನ ಶ್ರೀ ಕುಂಞಣ್ಣ ಭಂಡಾರಿ ಬಾಡೂರು, ಮಹಾಬಲೇಶ್ವರ ಭಟ್ ಎಡಕ್ಕಾನ, ಅಚ್ಯುತ ಚೇವಾರು, ಹರೀಶ್ ಬೊಟ್ಟಾರಿ ಮೊದಲಾದವರು ಭಾಗವಹಿಸುವರು. ಈ ಸಂದರ್ಭದಲ್ಲಿ ಉಪೇಂದ್ರ ಆಚಾರ್ಯ ಸಿ.ಎಚ್. ಗುರುಸ್ವಾಮಿ ಮತ್ತು ಅರ್ಚಕರು ಶ್ರೀ ಅಯ್ಯಪ್ಪ ಭಜನಾ ಮಂದಿರ ಚೇವಾರು, ಪಟ್ಲ ಇವರಿಗೆ ಗೌರವಾರ್ಪಣೆ ನಡೆಯಲಿದೆ.
ಬೆಳಿಗ್ಗೆ ಗಂಟೆ 11.30ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿಗೆ ವಿಶೇಷ ಭಸ್ಮಾರ್ಚನೆ, ಮಧ್ಯಾಹ್ನ 12.30ಕ್ಕೆ ಶ್ರೀ ಅಯ್ಯಪ್ಪ ದೇವರ ವಿಶೇಷ ಪೂಜೆ, ಶ್ರೀ ಅಯ್ಯಪ್ಪ ವಿಳಕ್ಕು ಪೂಜೆ, ಶ್ರೀ ಗೋಪಾಲಕೃಷ್ಣನ್ ಆಶಾನ್ ಶ್ರೀ ವಿಳಕ್ಕು ಸಂಘಂ ಅಮೇಟಿಕ್ಕರ ಕುಮಾರ ನೆಲ್ಲೂರ್, ಶ್ರೀ ಸತ್ಯನಾರಾಯಣ ಪೂಜೆಯ ಮಂಗಳಾರತಿ, ಪ್ರಸಾದ ವಿತರಣೆ ಜರಗಲಿದೆ.
ಸಾಯಂ. 6.00ರಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಕಟೀಲು ಇವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ, ಸಾಯಂ. 6.30ರಿಂದ ಕನಕಪ್ಪಾಡಿ ಶ್ರೀ ಮಹಾವಿಷ್ಣು ದೇವಸ್ಥಾನದಿಂದ ವಾದ್ಯಘೋಷಗಳೊಂದಿಗೆ ವೈಭವದ ಪಾಲೆಕೊಂಬು ಮೆರವಣಿಗೆ, ರಾತ್ರಿ ಗಂಟೆ 12.30ಕ್ಕೆ ದೀಪಾರಾಧನೆ ತಾಯಂಬಕ, ರಾತ್ರಿ ಗಂಟೆ 2ಕ್ಕೆ ಅಯ್ಯಪ್ಪ ಗೀತೆ, ರಾತ್ರಿ ಗಂಟೆ 3ಕ್ಕೆ ಹಣತೆ ದೀಪ ಮೆರವಣಿಗೆ, ಪ್ರಾತಃಕಾಲ ಗಂಟೆ 4ಕ್ಕೆ ಅಗ್ನಿಪೂಜೆ, ಪ್ರಾತಃಕಾಲ ಗಂಟೆ 5ಕ್ಕೆ ಅಯ್ಯಪ್ಪ ವಾವರ ಯುದ್ಧ ಮತ್ತು ಅಯ್ಯಪ್ಪ ವಿಳಕ್ಕುನೊಂದಿಗೆ ಉತ್ಸವ ಸಮಾಪ್ತಿಗೊಳ್ಳಲಿದೆ.

0 Comments