Ticker

6/recent/ticker-posts

Ad Code

ಟೈಲರ್ಸ್ ಅಸೋಸಿಯೇಷನ್ ಮಂಜೇಶ್ವರ ಯೂನಿಟ್ ಸಮ್ಮೇಳನ ಸಂಪನ್ನ

 

ಮಂಜೇಶ್ವರ : ಕೇರಳ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಮಂಜೇಶ್ವರ ಯೂನಿಟ್ ಸಮ್ಮೇಳನ ಹೊಸಂಗಡಿ ವ್ಯಾಪಾರಿ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇರಳ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಮಂಜೇಶ್ವರ ಯೂನಿಟ್ ಅಧ್ಯಕ್ಷ ಗಣೇಶ್ ಪಾವೂರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕೆ ಎಸ್ ಟಿ ಎ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ.ಎಸ್ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಮಂಜೇಶ್ವರ ವ್ಯಾಪಾರಿ ಏಕೋಪನ ಸಮಿತಿ ಅಧ್ಯಕ್ಷ ಬಶೀರ್ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯದರ್ಶಿ ಸತೀಶ್ ಆಚಾರ್ಯ ವಿಶ್ವನಾಥ್ ಶೆಟ್ಟಿ ಕುತ್ತನಾಡಿ ಮಾತನಾಡಿದರು. ಜೊತೆ ಕಾರ್ಯದರ್ಶಿ  ಪ್ರೇಮಲತಾ ವರದಿ ಮಂಡಿಸಿದರು. ಪುರುಷೋತ್ತಮ ಆಚಾರ್ಯ ಲೆಕ್ಕ ಪತ್ರ ಮಂಡಿಸಿದರು. ಸಭೆಯಲ್ಲಿ ಕೃಷ್ಣ ಕೇದುoಬಾಡಿ,  ಕಲಾವತಿ ಹೊಸಂಗಡಿ, ತಾಲ್ಲೂಕು ಖಜಾಂಚಿ  ವಿಜಯ ದೇವದಾಸ್, ಸ್ವಪ್ನ ಉದ್ಯಾವರ,  ಸುಚಿತಾ ತೂಮಿನಾಡು, ಗೀತಾ ಮಂಜೇಶ್ವರ, ರೂಪಾ ಕೀರ್ತಿಶ್ವರ ಮೊದಲಾದವರು ಉಪಸ್ಥಿತರಿದ್ದರು. ನಂತರ ನೂತನ ಸಮಿತಿ ರೂಪೀಕರಿಸಲಾಯಿತು. ಅಧ್ಯಕ್ಷರಾಗಿ ಗಣೇಶ್ ಪಾವೂರು ಪುನರ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಪುರುಷೋತ್ತಮ ಆಚಾರ್ಯ ಹಾಗೂ ಶರ್ಮಿಳಾ ವಿನಯ ಕುಮಾರ್, ಕೋಶಾಧಿಕಾರಿ ಸ್ವಪ್ನ ಉದ್ಯಾವರ, ಕಾರ್ಯದರ್ಶಿಯಾಗಿ ಕುಮುದ ರಾಜ್, ಜೊತೆ ಕಾರ್ಯದರ್ಶಿಯಾಗಿ ಪ್ರೇಮಲತಾ ಹಾಗೂ ಸುಚಿತಾ ತುಮಿನಾಡು ಆಯ್ಕೆಯಾದರು. ನೂರಾರು ಮಂದಿ ಟೈಲರ್ ಬಂಧುಗಳು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಕಾರ್ಯದರ್ಶಿ ಸುಜಾತಾ ಉದ್ಯಾವರ ಅವರಿಗೆ ಶಾಲು ಹಾಕಿ ಸನ್ಮಾನ ಮಾಡಲಾಯಿತು. ಕುಮುದ ರಾಜ್ ಸ್ವಾಗತಿಸಿ,  ಶರ್ಮಿಳಾ ವಿನಯ ಕುಮಾರ್ ವಂದಿಸಿದರು.

Post a Comment

0 Comments