Ticker

6/recent/ticker-posts

Ad Code

ಡಿ.26ರಂದು ಧಾರವಾಡದಲ್ಲಿ ಯುವ ಸಾಹಿತಿ ಡಾ. ಸುಭಾಷ್ ಪಟ್ಟಾಜೆಯವರ ಎರಡು ಕೃತಿಗಳು ಬಿಡುಗಡೆ

ಕಾಸರಗೋಡು : ಯುವ ಸಾಹಿತಿ ಡಾ. ಸುಭಾಷ್ ಪಟ್ಟಾಜೆಯವರ ಕಾಡು ಸಂಪಿಗೆ (ಕಥಾ ಸಂಕಲನ) ಮತ್ತು ಮಾಲತಿ ಪಟ್ಟಣಶೆಟ್ಟಿ ವ್ಯಕ್ತಿತ್ವ - ಸಾಹಿತ್ಯ (ಮೊನೋಗ್ರಾಫ್)  ಡಿಸೆಂಬರ್ 26 ರಂದು ಹಿರೇಮಲ್ಲೂರು ಈಶ್ವರನ್ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ(ಧಾರವಾಡ)ದಲ್ಲಿ  ಬಿಡುಗಡೆಯಾಗಲಿವೆ. ಕನ್ನಡದ ಹಿರಿಯ ಲೇಖಕಿ ಮಾಲತಿ ಪಟ್ಟಶೆಟ್ಟಿಯವರ ಕಣ್ಣಂಚಿನ ತಾರೆ (ಸಮಗ್ರ ಕಥೆಗಳು) ಮತ್ತು ವಿಕಾಸ ಹೊಸಮನಿಯವರ ಜೀವ ಸಂವಾದ (ಕಾದಂಬರಿ ಸಮೀಕ್ಷೆ) ಕೂಡ ಅನಾವರಣಗೊಳ್ಳಲಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಪ್ರೊ. ರಾಘವೇಂದ್ರ ಪಾಟೀಲ ಪುಸ್ತಕಗಳನ್ನು ಬಿಡುಗಡೆಗೊಳಿಸಲಿರುವರು. ಪ್ರೊ. ಅರುಂಧತಿ ಸವದತ್ತಿ, ಡಾ. ಅನಿತಾ ಗುಡಿ, ಲಿಂಗರಾಜ ಸೊಟ್ಟಪ್ಪನವರ ಕೃತಿ ವಿಮರ್ಶೆ ಮಾಡಲಿದ್ದಾರೆ. ಶಶಿಧರ ತೋಡಕರ ಅಧ್ಯಕ್ಷತೆ ವಹಿಸಲಿರುವರು. ಪ್ರೊ. ಸೀಮಾ ಕುಲಕರ್ಣಿ, ವಿಕಾಸ ಹೊಸಮನಿ ವೇದಿಕೆಯಲ್ಲಿ ಉಪಸ್ಥಿತರಿರುವರು.

Post a Comment

0 Comments