Ticker

6/recent/ticker-posts

Ad Code

ಸೋಶ್ಯಲ್ ಮೀಡಿಯದ ''ಬುಲೆಟ್ ಲೇಡಿ" ಎಂ.ಡಿ.ಎಂ.ಎ ಸಾಗಾಟದ ವೇಳೆ ಸೆರೆ

 

ಕಾಸರಗೋಡು : ಸಾಮಾಜಿಕ ಜಾಲತಾಣದಲ್ಲಿ 'ಬುಲೆಟ್ ಲೇಡಿ' ಎಂದು ಖ್ಯಾತಿವೆತ್ತ ಯುವತಿಯೋರ್ವಳನ್ನು ಮಾದಕ ದ್ರವ್ಯಗಳೊಂದಿಗೆ ಪಯ್ಯನ್ನೂರು ಅಬಕಾರಿ ತಂಡವು  ಬಂಧಿಸಿದೆ. ಮುಲ್ಲಕೋಡ್ ನಿವಾಸಿ ನಿಖಿಲಾ (30) ಬಂಧಿತ ಆರೋಪಿ. 

ನಿಖಿಲಾ ತನ್ನ ಸಂಚಾರ ಮತ್ತು ಬುಲೆಟ್‌ನಲ್ಲಿ ಸಾಹಸ ಪ್ರದರ್ಶನ ನೀಡುವ ಮೂಲಕ ಇನ್‌ಸ್ಟಾಗ್ರಾಮ್ ಸೇರಿದಂತೆ ಸೋಶ್ಯಲ್ ಮೀಡಿಯಗಳಲ್ಲಿ  ಜನಪ್ರಿಯತೆ ಗಳಿಸಿಕೊಂಡಿದ್ದಳು. ಈಕೆ ಮಾದಕ ದ್ರವ್ಯಗಳನ್ನು ಮಾರಾಟ ಮಾಡುತ್ತಿದ್ದಾಳೆ ಎಂದು ಅಬಕಾರಿ ಇಲಾಖೆಗೆ ಈ ಹಿಂದೆ ಸುಳಿವು ಸಿಕ್ಕಿತ್ತು. ಇದರಂತೆ ಈಕೆ ಪ್ರಯಾಣಿಸುತ್ತಿದ್ದ ವಾಹನವನ್ನು ಪಯ್ಯನ್ನೂರಿನಲ್ಲಿ ತಡೆದು ಪರಿಶೀಲಿಸಿದಾಗ ಮಾದಕ ದ್ರವ್ಯಗಳು ಪತ್ತೆಯಾಗಿದೆ. ನಾಲ್ಕು ಗ್ರಾಂ ಎಂ.ಡಿ.ಎಂ.ಎ ಪೋಲಿಸರು ವಶಪಡಿಸಿಕೊಂಡಿದ್ದಾರೆ.

ಅಬಕಾರಿ ತಂಡವು ನಿಖಿಲಾಳನ್ನು ಮುಲ್ಲಕ್ಕೋಡಿನಲ್ಲಿರುವ ಆಕೆಯ ಮನೆಗೆ ಕರೆದೊಯ್ದು ವಿವರವಾದ ಪರೀಕ್ಷೆ ನಡೆಸಿತು. ಮಾದಕ ದ್ರವ್ಯ ವ್ಯವಹಾರ ನಡೆಸಲು ಆಕೆ ಸಾಮಾಜಿಕ ಮಾಧ್ಯಮಗಳಲ್ಲಿನ ತನ್ನ ಪ್ರಭಾವವನ್ನು ಬಳಸಿದ್ದಾಳೆಯೇ ಮತ್ತು ಇದರ ಹಿಂದೆ ದೊಡ್ಡ ಮಾಫಿಯಾ ಗುಂಪುಗಳಿವೆಯೇ ಎಂದು ಅಬಕಾರಿ ತನಿಖೆ ನಡೆಸುತ್ತಿದೆ.

Post a Comment

0 Comments