ಮಂಜೇಶ್ವರ : ಶ್ರೀ ಅಯ್ಯಪ್ಪ ಸೇವಾ ಸಂಘ ಮೀಯಪದವು ಇದರ ಆಶ್ರಯದಲ್ಲಿ ಡಿ. 26ಕ್ಕೆ ಮೀಯಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದ ವಠಾರದಲ್ಲಿ 47ನೇ ವರ್ಷದ ಅಯ್ಯಪ್ಪ ದೀಪೋತ್ಸವ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಇದರ ಅಂಗವಾಗಿ ಅಂದು ಬೆಳಿಗ್ಗೆ 5.30 ಗಂಟೆಗೆ ವೇದಮೂರ್ತಿ ಶ್ರೀ ಗಣೇಶ ನಾವಡರ ನೇತೃತ್ವದಲ್ಲಿ ಗಣಪತಿ ಹೋಮ, ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ ಗಂಟೆ 12ಕ್ಕೆ ಮಹಾಪೂಜೆ, ರಾತ್ರಿ ಗಂಟೆ 7.00ರಿಂದ ಕೇರಳದ ಪ್ರಸಿದ್ಧ ಸಿಂಗಾರಿ ಮೇಳದೊಂದಿಗೆ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ತಾಲಪ್ಪೋಲಿ ಎಳುನೆಳ್ಳತ್ ಮೆರವಣಿಗೆ, ದೀಪಾರಾಧನೆ, ತಾಯಂಬಕ ಮತ್ತು ಅಗ್ನಿಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ರಾತ್ರಿ ಗಂಟೆ 9 ರಿಂದ ಊರ ಪ್ರತಿಭೆಗಳಿಂದ ನೃತ್ಯ ವೈವಿಧ್ಯ, ರಾತ್ರಿ ಗಂಟೆ 11.30 ರಿಂದ ರಂಗ ಕಲಾವಿದರು ತಲೆಕಳ ಇವರಿಂದ ದಯಾನಂದ ಮಾಡ ನಿರ್ದೇಶನದ, ಜಿ.ಎನ್. ಬಂಗೇರ ವಿಟ್ಲ ರಚನೆಯ, ಮಾಸ್ಟರ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ನಿರ್ವಹಣೆಯ, 'ಉಡಲೇ ಮೋಕೆದ ಕಡಲ್' ತುಳು ಸಾಮಾಜಿಕ ನಾಟಕ ಪ್ರದರ್ಶನ, ಪ್ರಾತಃಕಾಲ ಗಂಟೆ 4 ಗಂಟೆಗೆ ಅಗ್ನಿಸೇವೆ, ಅಗ್ನಿಪ್ರವೇಶ, ಪ್ರಸಾದ ವಿತರಣೆ ನಡೆಯಲಿರುವುದು.

0 Comments