Ticker

6/recent/ticker-posts

Ad Code

ವಿದೇಶಿ ಉದ್ಯೋಗ ಹೆಸರಿನಲ್ಲಿ 30 ಮಂದಿಗೆ ವಂಚನೆ: ಮೂವರ ವಿರುದ್ಧ ಕೇಸು

 

ಮಂಗಳೂರು : ವಿದೇಶದಲ್ಲಿ ಒಂದೂವರೆ ಲಕ್ಷರೂ. ಸಂಬಳ ಇರುವ ಕೆಲಸ ತೆಗೆಸಿಕೊಡುತ್ತೇನೆ ಎಂದು ಹೇಳಿ ಅಮಾಯಕ ಯುವಕರನ್ನು ದೂರದ ಬಡ ರಾಷ್ಟ್ರ ಅರ್ಮೇನಿಯಾಕ್ಕೆ ಕರೆಸಿಕೊಂಡು ಲಕ್ಷಾಂತರ ರೂಪಾಯಿ ಹಣ ಪಡೆದು ಮೋಸಗೈದ ಬಗ್ಗೆ ಮೂವರ ಬಗ್ಗೆ ಬಜ್ಜೆ ಮತ್ತು ಕದ್ರಿ ಠಾಣೆಯಲ್ಲಿ  ದೂರು ದಾಖಲಾಗಿದೆ.

ಗಂಜಿಮಠ ಮಣೇಲ್ ನಿವಾಸಿ ರಾಕೇಶ್ ರೈ,  ಭೂಷಣ್ ಕುಲಾಲ್ ಯೆಯ್ಯಾಡಿ ಮತ್ತು ಆಂಟನಿ ಪ್ರೀತಮ್ ಗರೋಡಿ ಎಂಬವರು ಹಣ ಪಡೆದು 30ಕ್ಕೂ ಹೆಚ್ಚು ಯುವಕರನ್ನು ಮೋಸ ಮಾಡಿದ್ದಾರೆಂದು ಸಂತ್ರಸ್ತ ಮಂಜುನಾಥ್ ನಾಯ್ಕ,  ಉಮೇಶ್ ಬಿ.ಸಿ.ರೋಡು, ಗಗನ್ ಯೆಯ್ಯಾಡಿ ಎಂಬವರು ದೂರಿನಲ್ಲಿ  ತಿಳಿಸಿದ್ದಾರೆ. ಈ ಮೂವರು ಯುವಕರು ಡಿ.4ರಂದು ಅರ್ಮೇನಿಯಾದ ಕಷ್ಟದಿಂದ ಪಾರಾಗಿ ಊರಿಗೆ ಬಂದಿದ್ದು ಲಿಖಿತ ದೂರಿನ‌ ಮೂಲಕ ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ.

ಎಡಪದವು ನಿವಾಸಿ ಮಂಜುನಾಥ್ ನಾಯ್ಕ ಎಂಬ ಯುವಕ ರಾಕೇಶ್ ರೈಗೆ ಈ ಹಿಂದೆಯೇ ಪರಿಚಯಸ್ಥನಾಗಿದ್ದು ಆರು ತಿಂಗಳ ಹಿಂದೆ  ಗಲ್ಫ್ ನಲ್ಲಿ ಉದ್ಯೋಗ ಇದೆಯೆಂದು ಹೇಳಿ ಅಮೆರಿಕ ಕಂಪನಿಯಲ್ಲಿ ಕೆಲಸ ತೆಗೆಸಿಕೊಡುತ್ತೇನೆ, ವೀಸಾ ಎಲ್ಲ ಮಾಡಿಕೊಡುತ್ತೇನೆಂದು ನಂಬಿಸಿ ಹಣ ಪಡೆದಿದ್ದರು. ಏಜನ್ಸಿ ಏನೂ ಇಲ್ಲ, ನಾವು ಅಲ್ಲಿಯೇ ಇದ್ದೇವೆ, ಯೂರೋದಲ್ಲಿ ಸಂಬಳ ಬರುತ್ತದೆ, ಇಂಡಿಯಾದ ಒಂದೂವರೆ ಲಕ್ಷ ಆಗುತ್ತದೆ ಎಂದು ನಂಬಿಸಿ ಕೊನೆಗೆ ಬಡ ದೇಶವಾದ ಅರ್ಮೇನಿಯಾಕ್ಕೆ ಕಳುಹಿಸಿ ಮೋಸ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.

Post a Comment

0 Comments