ಮಂಜೇಶ್ವರ: ಕಳೆದ 17 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಾ ಜನಾನುರಾಗಿಯಾಗಿದ್ದ ಆನೆಕಲ್ಲು ನಿವಾಸಿ, ವರ್ಕಾಡಿ ಧರ್ಮನಗರ ಮಣವಾಠಿ ಬೀವಿ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಾಪಕ ಗೋಪಾಲ ನಾಯ್ಕ( 47) ಅವರು ಹೃದಯಾಘಾತದಿಂದ ನಿಧನ ಹೊಂದಿದರು. ಶುಕ್ರವಾರ ಮಧ್ಯಾಹ್ನ ಕುಸಿದು ಬಿದ್ದಿದ್ದು ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲಾಗಿಲ್ಲ.ಇವರ ತಂದೆ ದಿ.ಪೊಡಿಯ ನಾಯ್ಕ. ಮೃತರು ತಾಯಿ ಸುಂದರಿ, ಪತ್ನಿ ಮಮತ, ಪುತ್ರರಾದ ರಕ್ಷಿತ್, ಯಕ್ಷಿತ್ ಹಾಗೂ ಸಹೋದರರಾದ ನಾರಾಯಣ (ಬಾಲಣ್ಣ ನೆಕ್ಕರೆಪದವು), ಕೃಷ್ಣ(ಅಧ್ಯಾಪಕ), ಸಹೋದರಿಯರಾದ ಕಮಲ, ಲಲಿತಾ, ಭಾವಂದಿರಾದ ನೀಲಪ್ಪ ನಾಯ್ಕ ಅರೆಮಂಗಿಲ, ಗುರುವಪ್ಪ ನಾಯ್ಕ ಹಾಗೂ ಅಪಾರ ಬಂಧುಗಳು, ಶಿಷ್ಯ ವರ್ಗವನ್ನು ಅಗಲಿದ್ದಾರೆ

0 Comments