ಧರ್ಮತ್ತಡ್ಕ : ಶ್ರೀ ದುರ್ಗಾಪರಮೇಶ್ವರಿ ಅನುದಾನಿತ ಹೈಯರ್ ಸೆಕೆಂಡರಿ ಶಾಲೆ, ಧರ್ಮತ್ತಡ್ಕದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಪ್ತದಿನ ಸಹವಾಸ ಶಿಬಿರ ಶ್ರೀ ದುರ್ಗಾಪರಮೇಶ್ವರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸಜಂಕಿಲದಲ್ಲಿ ಆರಂಭಗೊಂಡಿತು. ವಿದ್ಯಾರ್ಥಿಗಳು ವೈಭವದ ಮೆರವಣಿಗೆಯೊಂದಿಗೆ ಶಿಬಿರಕ್ಕೆ ಪ್ರವೇಶಿಸಿದರು. ಮೆರವಣಿಗೆಯನ್ನು ಧರ್ಮತ್ತಡ್ಕ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಅಶೋಕ್ ಭಂಡಾರಿ ಉದ್ಘಾಟಿಸಿದರು. ಶಾಲಾ ವ್ಯವಸ್ಥಾಪಕರಾದ ಶಂಕರನಾರಾಯಣ ಭಟ್ ಧ್ವಜಾರೋಹಣಗೈದರು. ಶಿಬಿರದ ಔಪಚಾರಿಕ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಜಂಕಿಲ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಆನಂದ ಕೆ. ಯವರು ವಹಿಸಿದರು. ಶಿಬಿರವನ್ನು ಸ್ಥಳೀಯ ವಾರ್ಡ್ ಸದಸ್ಯ ಸುಬ್ರಹ್ಮಣ್ಯ ಭಟ್ ಆಟಿಕುಕ್ಕೆ ಉದ್ಘಾಟಿಸಿದರು. ಧರ್ಮತ್ತಡ್ಕ ಶಾಲಾ ವ್ಯವಸ್ಥಾಪಕ ಶಂಕರನಾರಾಯಣ ಭಟ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಶೋಕ ಭಂಡಾರಿ, ಸಜಂಕಿಲ ಶಾಲಾ ಮಾತೃ ಮಂಡಳಿ ಅಧ್ಯಕ್ಷೆ ಸ್ಮಿತಾ, ಹಿರಿಯ ಪ್ರಾಥಮಿಕ ಶಾಲೆ ಧರ್ಮತ್ತಡ್ಕ ಇದರ ಶಾಲಾ ವ್ಯವಸ್ಥಾಪಕಿ ವಿಜಯಶ್ರೀ ನೇರೊಳು, ಸಜಂಕಿಲ ಶಾಲಾ ಮುಖ್ಯೋಪಾಧ್ಯಾಯ ಶ್ರೀಧರ ಭಟ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಎನ್.ಎಸ್.ಎಸ್ ಯೋಜನಾಧಿಕಾರಿ ನಿವೇದಿತಾ ಟೀಚರ್ ಶಿಬಿರದ ಪೂರ್ಣ ಮಾಹಿತಿ ನೀಡಿದರು. ಶಾಲಾ ಪ್ರಾಂಶುಪಾಲ ರಾಮಚಂದ್ರ ಭಟ್ ಎನ್ ಸ್ವಾಗತಿಸಿ, ಸಜಂಕಿಲ ಶಾಲಾ ಅಧ್ಯಾಪಕ ಶ್ರೀರಾಮ ಧನ್ಯವಾದವಿತ್ತರು. ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಅಂಗನವಾಡಿ ಶಿಕ್ಷಕಿ, ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು. ಧರ್ಮತಡ್ಕ ಶಾಲಾ ಹಿರಿಯ ಅಧ್ಯಾಪಕ ಸತೀಶ್ ಕುಮಾರ್ ಶೆಟ್ಟಿ ನಿರೂಪಿಸಿದರು.

0 Comments