Ticker

6/recent/ticker-posts

Ad Code

25 ಅಂತರ್ ರಾಜ್ಯ ಪ್ರಕರಣಗಳ ಆರೋಪಿ ಮೀಸೆ ರೌಫ್ ಕೊನೆಗೂ ಪೋಲಿಸ್ ಬಲೆಗೆ

ಕಾಸರಗೋಡು : ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 19ಕ್ಕೂ ಅಧಿಕ ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ, ತಲೆಮರೆಸಿಕೊಂಡಿದ್ದ ಉಪ್ಪಳ ನಿವಾಸಿ ಅಂತರ್ ರಾಜ್ಯ ಆರೋಪಿಯನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ. ಮಂಜೇಶ್ವರ ತಾಲೂಕಿನ ಉಪ್ಪಳ ನಿವಾಸಿ ಅಬ್ದುಲ್ ರೌಫ್ ಆಲಿಯಾಸ್ ಮೀಸೆ ರೌಫ್ (48)ಬಂಧಿತ ವ್ಯಕ್ತಿಯಾಗಿದ್ದಾನೆ. ಬಂಧಿತ ಆರೋಪಿಯ ವಿರುದ್ಧ ಕಾಸರಗೋಡು ಜಿಲ್ಲೆಯಲ್ಲಿ 19 ಪ್ರಕರಣಗಳಿವೆಯಲ್ಲದೇ ಮಂಗಳೂರು ನಗರದ ಕಾವೂರು ಪೊಲೀಸ್ ಠಾಣೆಯಲ್ಲಿ -1, ಕೋಣಾಜೆ ಠಾಣೆಯಲ್ಲಿ 5 ಪ್ರಕರಣ ಸೇರಿದಂತೆ ಒಟ್ಟು ಅಂತರ್ ರಾಜ್ಯದಲ್ಲಿ 25ಪ್ರಕರಣಗಳಿವೆ. ಈತನ ಬಂಧನಕ್ಕೆ ಕಾವೂರು ಠಾಣಾ ಪ್ರಕರಣದಲ್ಲಿ ಮಂಗಳೂರು ನ್ಯಾಯಾಲಯವು ದಸ್ತಗಿರಿ ವಾರಂಟ್ ಹೊರಡಿಸಿತ್ತು. ಕೋಣಾಜೆ ಠಾಣಾ ವ್ಯಾಪ್ತಿಯ 5 ಪ್ರಕರಣಗಳಲ್ಲಿ ಈತನನ್ನು ಉದ್ಘೋಷಿತ ಅಪರಾಧಿ ಎಂದು ನ್ಯಾಯಾಲಯ ಘೋಷಿಸಿತ್ತು. ಮಂಜೇಶ್ವರ ಪೊಲೀಸ್ ಠಾಣೆಯಲ್ಲೂ ಒಂದು ಪ್ರಕರಣದಲ್ಲಿ ಈತ ತಲೆಮರೆಸಿದ ಆರೋಪಿಯಾಗಿದ್ದನು. ಬಂಧಿತ ಆರೋಪಿ ರೌಫ್ ಅಂತರಾಜ್ಯ ನಟೋರಿಯಸ್ ಕ್ರಿಮಿನಲ್ ಕೇರಳ ರಾಜ್ಯಕ್ಕೆ ಸೇರಿದ ಉಪ್ಪಳದ ಪೖವಳಿಕೆ ನಿವಾಸಿ ಇಸುಬು ಜಿಯಾದ್ ಆಲಿಯಾಸ್ ಜಿಯಾ ಎಂಬಾತನ ಸಹಚರನೆಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಉತ್ತರ ಉಪ ವಿಭಾಗದ ಎಸಿಪಿ ಶ್ರೀಕಾಂತ್ ಕೆ. ಮಾರ್ಗದರ್ಶನದಲ್ಲಿ ಡಿ. 16ಕ್ಕೆ ವಶಕ್ಕೆ ಪಡೆದು ನ್ಯಾಯಾಂಗ ಕ್ರಮಕ್ಕಾಗಿ ಕಾವೂರು ಠಾಣಾ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

Post a Comment

0 Comments